ಪತ್ನಿ ಹಾಗೂ ಆಕೆಯ ಪೋಷಕರು ಕೊರೊನಾ ಸೋಂಕಿಗೆ ಒಳಗಾದ ಬಳಿಕ ಅವರನ್ನ ಆಸ್ಪತ್ರೆಗೆ ಸೇರಿಸೋದು ಸೂಕ್ತವಲ್ಲವೆಂದು ಭಾವಿಸಿದ ವೈದ್ಯಕೀಯ ಸಿಬ್ಬಂದಿಯೊಬ್ಬ ಮನೆಯಲ್ಲೇ ಐಸಿಯು ನಿರ್ಮಾಣ ಮಾಡಿದ ಘಟನೆ ಗ್ರೀಸ್ನಲ್ಲಿ ನಡೆದಿದೆ.
ಪಟ್ಟಣದಿಂದ ಸುಮಾರು 30 ಕಿಲೋಮೀಟರ್ ದೂರದಲ್ಲಿ ಅಗಿಯೋಸ್ ಅಥಾನಾಸಿಯೋಸ್ ಗ್ರಾಮದಲ್ಲಿ ಎರಡು ಅಂತಸ್ತಿನ ಮನೆಯ ಕೆಳಗಿರುವ ಅಪಾರ್ಟ್ಮೆಂಟ್ನಲ್ಲಿ ತಾತ್ಕಾಲಿಕ ಐಸಿಯುವನ್ನ ಸ್ಥಾಪನೆ ಮಾಡಲಾಯ್ತು.
ಈ ಅಪಾರ್ಟ್ಮೆಂಟ್ಗೆ ಐಸಿಯುಗೆ ಬೇಕಾದ ಆಮ್ಲಜನಕ ವಿತರಣಾ ಯಂತ್ರಗಳು, ಮಾನಿಟರ್ಗಳನ್ನ ಅವರು ಬಾಡಿಗೆಗೆ ಪಡೆದರು. ಇಲ್ಲಿ ತನ್ನ ಕುಟುಂಬಸ್ಥರನ್ನ ದಾಖಲಿಸಿ ಚಿಕಿತ್ಸೆ ನೀಡಿದ್ರು.
ಅಳಿಯನ ಸಹಾಯದಿಂದ ನಾವು ಪ್ರಾಣಾಪಾಯದಿಂದ ಬಚಾವಾಗೋಕೆ ಸಾಧ್ಯವಾಯ್ತು. ಐಸಿಯುಗೆ ಕೊರತೆ ಇದ್ದ ಈ ಸಮಯದಲ್ಲಿ ನಾವು ಬದುಕೋದೇ ಕಷ್ಟವಿತ್ತು ಅಂತಾ ವೈದ್ಯಕೀಯ ಸಿಬ್ಬಂದಿಯ ಅತ್ತೆ ಹೇಳಿದ್ದಾರೆ.