ಭಾರೀ ಗಾತ್ರದ ಬಿಳಿ ಶಾರ್ಕ್ ಒಂದು ಗಾಳಿಯಲ್ಲಿ 15 ಅಡಿ ಎತ್ತರದಲ್ಲಿ ಹಾರುತ್ತಿರುವ ಒಂದಷ್ಟು ಚಿತ್ರಗಳು ಸದ್ದು ಮಾಡುತ್ತಿವೆ. ನೀರಿನಿಂದ ಗಾಳಿಗೆ ಅತ್ಯಂತ ಹೆಚ್ಚು ಎತ್ತರಕ್ಕೆ ಹಾರಿದ ವಿಶ್ವದಾಖಲೆ ಇದಾಗಿದೆ.
ಕ್ರಿಸ್ ಫಾಲ್ಲೋಸ್ ಎಂಬ ಛಾಯಾಗ್ರಾಹಕ ಈ ಚಿತ್ರಗಳನ್ನು ದಕ್ಷಿಣ ಆಫ್ರಿಕಾದ ಸೀಲ್ ದ್ವೀಪದಲ್ಲಿ ಸೆರೆ ಹಿಡಿದಿದ್ದಾರೆ. ಡಿಸ್ಕವರಿ ಚಾನೆಲ್‌ನ ಶಾರ್ಕ್ ವೀಕ್ ಕಾರ್ಯಕ್ರಮದ ವೇಳೆ ಈ ಚಿತ್ರಗಳನ್ನು ಸೆರೆ ಹಿಡಿಯಲಾಗಿದೆ.
ಈ ವೇಳೆ ಸಾಕಷ್ಟು ಮಂದಿ ಡ್ರೋನ್ ಬಳಸಿಕೊಂಡು ಶಾರ್ಕ್‌ನ ಚಿತ್ರಗಳನ್ನು ಸೆರೆ ಹಿಡಿದಿದ್ದರೆ, ಈತ ಟೋ ಕ್ಯಾಮೆರಾ ಬಳಸಿಕೊಂಡು ಈ ಅದ್ಧೂರಿ ಚಿತ್ರಗಳನ್ನು ತಮ್ಮ ಕ್ಯಾಮೆರಾ ಕಣ್ಣಿನಲ್ಲಿ ಸೆರೆ ಹಿಡಿದುಕೊಂಡಿದ್ದಾರೆ. ಶಾರ್ಕ್ ಛಾಯಾಗ್ರಾಹಕರನ್ನು ಒಂದೆಡೆ ತರಲಾಗಿದ್ದ ಈ ಫೋಟೋಗ್ರಫಿ ಕಾರ್ಯಕ್ರಮದಲ್ಲಿ ಸಾಕಷ್ಟು ಅದ್ಭುತವಾದ ಚಿತ್ರಗಳನ್ನು ಕ್ಯಾಪ್ಚರ್ ಮಾಡಲಾಗಿದೆ.