alex Certify 15 ಅಡಿ ಎತ್ತರದಲ್ಲಿ ಹಾರುವ ಶಾರ್ಕ್ ಚಿತ್ರ ವೈರಲ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

15 ಅಡಿ ಎತ್ತರದಲ್ಲಿ ಹಾರುವ ಶಾರ್ಕ್ ಚಿತ್ರ ವೈರಲ್

ಭಾರೀ ಗಾತ್ರದ ಬಿಳಿ ಶಾರ್ಕ್ ಒಂದು ಗಾಳಿಯಲ್ಲಿ 15 ಅಡಿ ಎತ್ತರದಲ್ಲಿ ಹಾರುತ್ತಿರುವ ಒಂದಷ್ಟು ಚಿತ್ರಗಳು ಸದ್ದು ಮಾಡುತ್ತಿವೆ. ನೀರಿನಿಂದ ಗಾಳಿಗೆ ಅತ್ಯಂತ ಹೆಚ್ಚು ಎತ್ತರಕ್ಕೆ ಹಾರಿದ ವಿಶ್ವದಾಖಲೆ ಇದಾಗಿದೆ.

ಕ್ರಿಸ್ ಫಾಲ್ಲೋಸ್‌ ಎಂಬ ಛಾಯಾಗ್ರಾಹಕ ಈ ಚಿತ್ರಗಳನ್ನು ದಕ್ಷಿಣ ಆಫ್ರಿಕಾದ ಸೀಲ್ ದ್ವೀಪದಲ್ಲಿ ಸೆರೆ ಹಿಡಿದಿದ್ದಾರೆ. ಡಿಸ್ಕವರಿ ಚಾನೆಲ್‌ನ ಶಾರ್ಕ್ ವೀಕ್ ಕಾರ್ಯಕ್ರಮದ ವೇಳೆ ಈ ಚಿತ್ರಗಳನ್ನು ಸೆರೆ ಹಿಡಿಯಲಾಗಿದೆ.

ಈ ವೇಳೆ ಸಾಕಷ್ಟು ಮಂದಿ ಡ್ರೋನ್ ಬಳಸಿಕೊಂಡು ಶಾರ್ಕ್‌ನ ಚಿತ್ರಗಳನ್ನು ಸೆರೆ ಹಿಡಿದಿದ್ದರೆ, ಈತ ಟೋ ಕ್ಯಾಮೆರಾ ಬಳಸಿಕೊಂಡು ಈ ಅದ್ಧೂರಿ ಚಿತ್ರಗಳನ್ನು ತಮ್ಮ ಕ್ಯಾಮೆರಾ ಕಣ್ಣಿನಲ್ಲಿ ಸೆರೆ ಹಿಡಿದುಕೊಂಡಿದ್ದಾರೆ. ಶಾರ್ಕ್ ಛಾಯಾಗ್ರಾಹಕರನ್ನು ಒಂದೆಡೆ ತರಲಾಗಿದ್ದ ಈ ಫೋಟೋಗ್ರಫಿ ಕಾರ್ಯಕ್ರಮದಲ್ಲಿ ಸಾಕಷ್ಟು ಅದ್ಭುತವಾದ ಚಿತ್ರಗಳನ್ನು ಕ್ಯಾಪ್ಚರ್‌ ಮಾಡಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...