ಕೋವಿಡ್-19 ಕಾಟದಿಂದ ಹಿರಿಯರಿಗೆ ತಮ್ಮ ಮೊಮ್ಮಕ್ಕಳನ್ನು ನೆಮ್ಮದಿಯಾಗಿ ಅಪ್ಪಿಕೊಳ್ಳಲೂ ಸಾಧ್ಯವಾಗುತ್ತಿಲ್ಲ. ಈ ಸೋಂಕು ವಯಸ್ಸಾದವರಿಗೆ ತಗುಲುವ ಸಾಧ್ಯತೆಗಳು ಹೆಚ್ಚಿರುವ ಕಾರಣ ಈ ಸಂಕಟ ಪಡಬೇಕಾಗಿದೆ.
ಈ ಕಾರಣದಿಂದಲೇ ಅಪ್ಪಿಕೊಳ್ಳಲೆಂದೇ ವಿಶೇಷ ಪರದೆಯೊಂದು ಹೊರಬಂದಿದ್ದು ಅದು ಭಾರೀ ಜನಪ್ರಿಯತೆ ಗಿಟ್ಟಿಸಿದೆ. ಈ ಪರದೆ ಹಾಕಿಕೊಂಡು ಅಪ್ಪಿಕೊಳ್ಳುವುದರಿಂದ ಆ ವ್ಯಕ್ತಿಗಳು ಪರಸ್ಪರ ದೈಹಿಕವಾಗಿ ಸಂಪರ್ಕಕ್ಕೆ ಬರದೇ ಆಲಿಂಗನ ಮಾಡಿಕೊಳ್ಳಬಹುದಾಗಿದೆ.
ಬ್ರಿಟನ್‌ನ ಹಿರಿಯ ದಂಪತಿಯೊಂದು ತಮ್ಮ ಮೊಮ್ಮಕ್ಕಳನ್ನು ಆಲಿಂಗಿಸಿಕೊಳ್ಳಲು ಹೊಸದೊಂದು ಐಡಿಯಾ ಕಂಡುಕೊಂಡಿದ್ದಾರೆ. ಬಾರ್ಬರಾ ಹಾಗೂ ಕ್ಲೈವ್ ವಾಲ್ಶಾ ಹೆಸರಿನ ಈ ಜೋಡಿ ಈಗ 70ರ ಹರೆಯದಲ್ಲಿದೆ. ಕಳೆದ ಮಾರ್ಚ್‌ನಿಂದಲೂ ಇವರಿಗೆ ತಮ್ಮ ಮೊಮ್ಮಕ್ಕಳನ್ನು ಅಪ್ಪಿ ಮುದ್ದಾಡಲು ಸಾಧ್ಯವಾಗಿಲ್ಲ.
ಹಿಮಗರಡಿಯ ಕಾಸ್ಟ್ಯೂಮ್‌ನಲ್ಲಿ ಮಿಂಚುತ್ತಿರುವ ಈ ಜೋಡಿ ತಮ್ಮ ಮೊಮ್ಮಕ್ಕಳನ್ನು ಆಲಿಂಗಿಸಿಕೊಳ್ಳುತ್ತಿರುವ ಚಿತ್ರಗಳು ವೈರಲ್ ಆಗಿದ್ದು, ನೆಟ್ಟಿಗರ ಹೃದಯ ಗೆಲ್ಲುತ್ತಿವೆ.