alex Certify ಮೊಮ್ಮಕ್ಕಳನ್ನು ಭೇಟಿಯಾಗಲು ವೃದ್ದೆಯಿಂದ ಸಖತ್ ಪ್ಲಾನ್…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮೊಮ್ಮಕ್ಕಳನ್ನು ಭೇಟಿಯಾಗಲು ವೃದ್ದೆಯಿಂದ ಸಖತ್ ಪ್ಲಾನ್…!

ಕೊರೊನಾ ಹಾಗೂ ಲಾಕ್ ಡೌನ್ ಕುಟುಂಬ ಹಾಗೂ ಆತ್ಮೀಯರು ಭೇಟಿಯಾಗುವುದನ್ನು ತಪ್ಪಿಸಿದೆ.‌ ಪ್ರೀತಿ ಪಾತ್ರರನ್ನು ಒಮ್ಮೆ ಭೇಟಿಯಾಗಿ ಬಿಗಿದಪ್ಪೋಣ ಎಂದರೆ, ಸಾಮಾಜಿಕ‌ ಅಂತರ ಕಾಯ್ದುಕೊಳ್ಳಬೇಕಾದ ಅನಿವಾರ್ಯತೆ ಎದುರಾಗುತ್ತದೆ. ಇದರಿಂದ ಹಲವರು ಭೇಟಿಗೆ ಹೊಸ ಹೊಸ ವಿಧಾನಗಳನ್ನು ಕಂಡುಕೊಳ್ಳುತ್ತಿದ್ದಾರೆ‌.

ಮೌರಿನ್ ಸ್ವಿನ್ನಿ ಅವರ ಮನೆಯಿಂದ ನಾಲ್ಕೈದು ಮನೆಗಳಾಚೆಯೇ ಅವರ ಮಗನ ಮನೆ ಇದ್ದರೂ ಕೊರೊನಾ ಕಾರಣದಿಂದ ತಮ್ಮ‌‌ ಮೊಮ್ಮಕ್ಕಳನ್ನು ಮಾರ್ಚ್‌ 17 ರ ನಂತರ ಭೇಟಿಯಾಗಿ ಪ್ರೀತಿ ಮಾಡಲು ಅವರಿಗೆ ಸಾಧ್ಯವಾಗಿರಲಿಲ್ಲ. ಇದರಿಂದ ಹೊಸ ಉಪಾಯವನ್ನು ಹುಡುಕಿದರು.

ಏಕಶೃಂಗಿ ಅಥವಾ ಒಕ್ಕಂಬಿ ಎಂದು ಕರೆಯುವ ಪ್ರಾಣಿಯ ಆಟಿಕೆಯ ಧಿರಿಸು ಧರಿಸಿ ಅವರು ಗಾರ್ಡನ್ ಒಂದರಲ್ಲಿ ತಮ್ಮ ಮೊಮ್ಮಕ್ಕಳಾದ ರೆಯಾನ್ ಮತ್ತು ಲಿಂಕೊನ್‌ ಅವರನ್ನು ಭೇಟಿಯಾಗಿ ಬಿಗಿದಪ್ಪಿದ್ದಾರೆ. ಅವರ ಈ ವರ್ಣರಂಜಿತ ಪ್ರಯತ್ನದಿಂದ ಕೊರೊನಾದ ಭೀತಿಯೂ ಇಲ್ಲ. ಮೊಮ್ಮಕ್ಕಳನ್ನು‌ ಮುದ್ದಿಸುವ ಅವರ ಆಸೆಯೂ ಈಡೇರಿದೆ.‌

ಮೌರಿನ್ ಅವರ ಮಗ ಹಗ್ ಡಿಲ್ಲೊನ್ ಭೇಟಿಯ ನಂತರ ಸಾಮಾಜಿಕ ಜಾಲತಾಣಗಳಲ್ಲಿ ಇದರ ವಿಡಿಯೋವನ್ನು ಶೇರ್ ಮಾಡಿದ್ದಾರೆ. ಹಿಂದೆ ಸ್ಪೇನ್ ನಲ್ಲಿ ಕ್ವಾರಂಟೈನ್ ನಲ್ಲಿದ್ದ‌ ವ್ಯಕ್ತಿಯೊಬ್ಬ ಹೀಗೆ ಡೈನೋಸಾರ್ ಧಿರಿಸು ಹಾಕಿಕೊಂಡು, ಮನೆಯಿಂದ ತಪ್ಪಿಸಿಕೊಳ್ಳಲು ಹೋಗಿ ಪೊಲೀಸರ ಕೈಗೆ ಸಿಕ್ಕಿ ಹಾಕಿಕೊಂಡು ಸುದ್ದಿಯಾಗಿದ್ದ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...