ಈ ಅಂತೆಕಂತೆಗಳು ಹಾಗೂ ಊಹಾಪೋಹಳು ಸಾಕಷ್ಟು ಪ್ರಮಾಣದಲ್ಲಿ ಅಂತರ್ಜಾಲದಲ್ಲಿ ಸದ್ದು ಮಾಡುತ್ತಲೇ ಇರುತ್ತವೆ. ಅಂಟಾರ್ಕ್ಟಿಕಾ ಕರಾವಳಿಯಿಂದ 160 ಕಿಮೀ ದೂರದಲ್ಲಿ 400 ಅಡಿ ಉದ್ದದ ಮಂಜಿನ ಹಡಗೊಂದು ಕಾಣಿಸಿಕೊಂಡಿದೆ.
ಕ್ರೂಸ್ ಲೈನರ್‌ನಂತೆ ಕಾಣುವ ಈ ಮಂಜಿನ ಆಕೃತಿಯು ನ್ಯೂಜಿಲೆಂಡ್‌ನ ದಕ್ಷಿಣ ಪ್ರದೇಶದಲ್ಲಿದ್ದು, ಗೂಗಲ್ ಅರ್ತ್‌ನಲ್ಲಿ ಕಾಣಿಸಿಕೊಂಡಿದೆ. ಈ ಆಕೃತಿಯಲ್ಲಿ ಬಹಳಷ್ಟು ವಿಚಾರಗಳು ಅಡಗಿವೆ ಎಂದು ಸಾಕಷ್ಟು ಊಹಾಪೋಹಗಳು ಹಬ್ಬಿಕೊಂಡಿವೆ.
MrMBB333 ಹೆಸರಿನ ಯೂಟ್ಯೂಬರ್ ಈ ಸುದ್ದಿಯನ್ನು ಮೊದಲ ಬಾರಿಗೆ ಶೇರ್ ಮಾಡಿಕೊಂಡಿದ್ದು, 10 ನಿಮಿಷಗಳ ಮಟ್ಟಿಗೆ ಈ ಕುರಿತಾಗಿ ವಿವರಗಳನ್ನು ಹಂಚಿಕೊಂಡಿದ್ದಾರೆ.