ಜಗತ್ತಿನೆಲ್ಲೆಡೆ ಕೋವಿಡ್ ಲಸಿಕೆಯದ್ದೇ ಸುದ್ದಿಯಾಗಿದೆ. 2021ರ ವರ್ಷವನ್ನಾದರೂ ನೆಮ್ಮದಿಯಿಂದ ಕಳೆಯೋಣ ಎಂದು ಕೋವಿಡ್-19 ವಿರುದ್ಧದ ಲಸಿಕೆ ಕಾರ್ಯಕ್ರಮಕ್ಕೆ ಜಗತ್ತಿನ ದೊಡ್ಡ ದೇಶಗಳೆಲ್ಲಾ ಬಹಳ ಒತ್ತು ಕೊಡುತ್ತಿವೆ.
ಹಾಲಿವುಡ್ ನಟ ಸ್ಟೀವ್ ಮಾರ್ಟಿನ್ ಕೋವಿಡ್-19 ಲಸಿಕೆ ಹಾಕಿಸಿಕೊಂಡ ಅನುಭವ ಹಂಚಿಕೊಂಡಿದ್ದಾರೆ.
“ಗುಡ್ ನ್ಯೂಸ್/ಬ್ಯಾಡ್ ನ್ಯೂಸ್. ಗುಡ್ ನ್ಯೂಸ್: ನಾನು ಈಗ ತಾನೇ ಲಸಿಕೆ ಹಾಕಿಸಿಕೊಂಡೆ..! ಬ್ಯಾಡ್ ನ್ಯೂಸ್: ನನಗೆ 75 ವರ್ಷವಾದ ಕಾರಣ ಲಸಿಕೆ ಹಾಕಿಸಿಕೊಳ್ಳಬೇಕಾಯಿತು” ಎಂದು ಮಾರ್ಟಿನ್ ತಮಾಷೆಯಾಗಿ ಟ್ವೀಟ್ ಮಾಡಿದ್ದಾರೆ.
ಲಸಿಕೆ ಕಾರ್ಯಕ್ರಮವನ್ನು ನಾಜೂಕಾಗಿ ನಡೆಸಿಕೊಂಡು ಹೋಗಲು ವ್ಯವಸ್ಥೆ ಮಾಡಿರುವ ಅಮೆರಿಕದ ಸೇನೆ ಹಾಗೂ ನೌಕಾಪಡೆಗೆ ಧನ್ಯವಾದ ತಿಳಿಸಿದ್ದಾರೆ ಸ್ಟೀವ್.
https://twitter.com/SteveMartinToGo/status/1350848052379189249?ref_src=twsrc%5Etfw%7Ctwcamp%5Etweetembed%7Ctwterm%5E1350848052379189249%7Ctwgr%5E%7Ctwcon%5Es1_&ref_url=https%3A%2F%2Fwww.news18.com%2Fnews%2Fbuzz%2Fgood-news-bad-news-actor-steve-martin-opens-up-about-getting-covid-19-vaccine-at-75-3307592.html