alex Certify ಬೆರಗಾಗಿಸುತ್ತೆ‌ ವಿಮಾನದಲ್ಲಿನ ಏರ್ ಹೋಸ್ಟೆಸ್ ಸ್ಟಂಟ್‌….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬೆರಗಾಗಿಸುತ್ತೆ‌ ವಿಮಾನದಲ್ಲಿನ ಏರ್ ಹೋಸ್ಟೆಸ್ ಸ್ಟಂಟ್‌….!

ಫಿಲಿಡೆಲ್ಫಿಯಾ: ವಿಮಾನದಲ್ಲಿ ನಾಜೂಕಾಗಿ ಓಡಾಡಿಕೊಂಡು ಪ್ರಯಾಣಿಕರ ಸುಖಕರ ಪ್ರಯಾಣಕ್ಕೆ ಅನುವಾಗುವ ಸುಂದರ ಏರ್ ಹೋಸ್ಟೆಸ್‌ಗಳು ಕಷ್ಟಕರ ಸ್ಟಂಟ್‌ಗಳನ್ನೂ ಮಾಡಬಲ್ಲರು. ಹೌದು, ವಿಮಾನವೊಂದರಲ್ಲಿ ಮಹಿಳಾ ಸಿಬ್ಬಂದಿ ಸ್ಟಂಟ್ ಮಾಡುವ ಫೋಟೋ ಈಗ ಟ್ವಿಟರ್‌ನಲ್ಲಿ ವೈರಲ್ ಆಗಿದೆ.

ನಾಶಾವಿಲ್ಲೆಯಿಂದ ಫಿಲಿಡೆಲ್ಫಿಯಾಕ್ಕೆ ಹೊರಟ ಸೌತ್‌ವೆಸ್ಟ್ ಏರ್‌ಲೈನ್ಸ್‌ನ ವಿಮಾನವೊಂದರ ಮಹಿಳಾ ಸಿಬ್ಬಂದಿಯ ಅಕ್ರೊಬೈಟ್ ಸ್ಟಂಟ್ ಒಂದನ್ನು ಕೆಲ ತಿಂಗಳ ಹಿಂದೆ ಪ್ರಯಾಣಿಕರಾದ ಪೆನ್ಸಲ್ವೇನಿಯಾದ ವೆರೊನಿಕಾ ಲಾಯ್ಡ್ ಎಂಬುವವರು ಶೇರ್ ಮಾಡಿದ್ದರು. ಈ ಸಂಬಂಧ ಸೌತ್ ವೆಸ್ಟನ್ ಏರ್‌ವೇಸ್ ಸ್ಪಷ್ಟನೆ ನೀಡಿ ‘ನಮ್ಮ ಸಿಬ್ಬಂದಿ ಕ್ರಿಯಾಶೀಲರು ಸೆನ್ಸ್ ಆಫ್ ಹ್ಯೂಮರ್ ಹೊಂದಿದ್ದಾರೆ. ಪ್ರಯಾಣಿಕರ ಸುರಕ್ಷತೆ ನಮ್ಮ ಮೊದಲ ಗುರಿ’ ಎಂದಿತ್ತು.

ಈಗ ಅಂಥದ್ದೇ ಮತ್ತೊಂದು ವಿಡಿಯೋ ವೈರಲ್ ಆಗಿದೆ. ವಿಮಾನದ ಆಸನಗಳ ಮೇಲೆ ಬ್ಯಾಗ್‌ಗಳನ್ನು ಇಡಲು ಇರುವ ಓವರ್ ಹೆಡ್ ಕ್ಯಾಬಿನ್‌ನ ಬಾಗಿಲುಗಳನ್ನು ಮಹಿಳಾ ಸಿಬ್ಬಂದಿ ತಲೆಕೆಳಗಾಗಿ ಕೇವಲ ಕೈಗಳ ಸಹಾಯದಿಂದ ನಿಂತು ಕಾಲಿನ ಹೈ ಹೀಲ್ಡ್ ನಿಂದ ಮುಚ್ಚುವ ವಿಡಿಯೋ ಸಖತ್ ವೈರಲ್ ಆಗಿದೆ. 35 ವರ್ಷದ ಲಿಂಡ್ಸೆ ಒಬ್ರೇನ್ ಎಂಬ ಮಹಿಳಾ ಸಿಬ್ಬಂದಿ ಈ ಸ್ಟಂಟ್ ಮಾಡಿದ್ದಾರೆ. ಆದರೆ, ವಿಮಾನದಲ್ಲಿ ಯಾವುದೇ ಇತರೆ ಸಿಬ್ಬಂದಿ ಇಲ್ಲ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...