ಅಮೆರಿಕದ ವಾಷಿಂಗ್ಟನ್ನಲ್ಲಿ ನೀವು 10 ಜನರಿರುವ ಗುಂಪಿನಲ್ಲಿ ಇದ್ದೀರಿ ಅಂದರೆ ನೀವು ಸೋಂಕು ತಗಲುವ ಸಾಧ್ಯತೆ ಶೇಕಡಾ 18ರಷ್ಟಿರುತ್ತೆ. ಅದೇ ನೀವು ಪ್ಯಾರಿಸ್ನಲ್ಲಿದೆ ಇದ್ದರೆ ಈ ಸಾಧ್ಯತೆ 32 ಪ್ರತಿಶತದಷ್ಟು ಅಂತಾ ವರದಿಗಳು ಹೇಳಿವೆ.
ಅಮೆರಿಕದ ವಿಜ್ಞಾನಿಗಳು ಇಂತಹದ್ದೊಂದು ಸಂಶೋಧನೆ ಮಾಡಿದ್ದು ಸಾಮಾಜಿಕ ಅಂತರ ಪಾಲನೆ ಮಾಡದೇ ಇದ್ದರೆ ಉಂಟಾಗಬಲ್ಲ ಸಮಸ್ಯೆಗಳ ಬಗ್ಗೆ ವರದಿ ನೀಡಿದ್ದಾರೆ. ಜಾರ್ಜಿಯಾ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ತಂಡ ಅಭಿವೃದ್ಧಿಪಡಿಸಿರುವ ಈ ಉಪಕರಣವು ಅಮೆರಿಕ ಹಾಗೂ ಯುರೋಪಿಯನ್ ದೇಶಗಳಲ್ಲಿ ಕೊರೊನಾ ಹರಡುವಿಕೆ ದರದ ಮಾಹಿತಿ ನೀಡಲಿದೆ.
ಈ ಉಪಕರಣ ಕೊರೊನಾ ಹರಡುವಿಕೆ ಪ್ರಮಾಣದ ಬಗ್ಗೆ ಮಾಹಿತಿ ನೀಡುತ್ತದೆಯಾದರೂ, ಯಾವ ರೀತಿಯ ಕಾರ್ಯಕ್ರಮ, ನೆರೆದ ಜನರಲ್ಲಿ ಎಷ್ಟು ಮಂದಿ ಮಾಸ್ಕ್ ಧರಿಸಿದ್ದಾರೆ? ಸಾಮಾಜಿಕ ಅಂತರ ಕಾಪಾಡಿದ್ದಾರೆ ಈ ಎಲ್ಲ ಅಂಶಗಳ ಮೇಲೂ ಅನುಪಾತ ಬದಲಾಗಬಹುದು.