ಲಂಡನ್: ಕಸದ ಜತೆ ಹೋಗಿದ್ದ ಮದುವೆ ಉಂಗುರವನ್ನು ನಗರಾಡಳಿತ ಕಾರ್ಮಿಕರು ಹುಡುಕಿ ಕೊಡುವ ಮೂಲಕ ಯುನೈಟೆಡ್ ಕಿಂಗ್ಡಮ್ ನ ವ್ಯಕ್ತಿಯೊಬ್ಬರ ಸಂತಸ ವೃದ್ಧಿಸಿದ್ದಾರೆ.
ಯುಕೆಯ ಉತ್ತರ ಶೀಲ್ಡ್ಸ್ ನ ಜಾಮ್ ರೋಸ್ ಎಂಬುವವರ ಹಳೆಯ ಕಾರ್ಡ್ ಬೋರ್ಡ್ ಗಳನ್ನು ಕಸದ ವಾಹನಕ್ಕೆ ಎಸೆಯುವಾಗ ಅದರ ಜತೆ ಅವರ ಕೈಯ್ಯಲ್ಲಿದ್ದ ಮದುವೆ ಉಂಗುರವೂ ಜಾರಿ ಹೋಗಿತ್ತು. ಅವರು ನಗರಾಡಳಿತಕ್ಕೆ ಈ ಬಗ್ಗೆ ಕೇಳಿದ್ದರು. ಆದರೂ ಅದು ಮತ್ತೆ ಸಿಗುತ್ತದೆ ಎಂಬ ಆಸೆಯನ್ನು ಅವರು ಬಿಟ್ಟಿದ್ದರು.
ಮನೆಗೆ ಮರಳಿದ ಮಹಿಳೆಗೆ ಕಾದಿತ್ತು ಶಾಕ್: ಬಿಯರ್ ಹೀರುತ್ತ ಕುಳಿತ ಅಪರಿಚಿತ ಹೇಳಿದ ಮಾತು ಕೇಳಿ ದಂಗಾದ ಮನೆಯೊಡತಿ
ಉತ್ತರ ಟೆನ್ನಿಸೈಡ್ ಕೌನ್ಸಿಲ್ ಸಿಬ್ಬಂದಿ ಕಸ ವಿಲೇವಾರಿ ವೇಳೆ 10 ಅಡಿ ಆಳದಲ್ಲಿ ಮಣ್ಣಿನ ರಾಡಿಯಲ್ಲಿ ಉಂಗುರ ಕಂಡಿತ್ತು. ಅದನ್ನು ಮತ್ತೆ ಜಾಮ್ ಅವರಿಗೆ ಮರಳಿಸಿದ ನಗರ ಆಡಳಿತದ ಸಿಬ್ಬಂದಿ ಅವರ ವ್ಯಾಲೆಂಟೈನ್ ದಿನದ ಸಂತಸ ಹೆಚ್ಚಿಸಿದ್ದಾರೆ.
ಉತ್ತರ ಟೆನ್ನಿಸೈಡ್ ಕೌನ್ಸಿಲ್ ಈ ಕಥೆಯನ್ನು ತನ್ನ ಫೇಸ್ ಬುಕ್ ಪೇಜ್ ನಲ್ಲಿ ಹಂಚಿಕೊಂಡಿದೆ. ಉಂಗುರ ಹುಡುಕಿದ ಸಿಬ್ಬಂದಿ ಫೋಟೋ ಹಾಕಿದೆ. ಕಸದ ರಾಶಿಯ ಮೇಲೆ ನಿಂತು ಉಂಗುರ ಹಿಡಿದು ನಿಂತ ಸೂಪರ್ ಮ್ಯಾನ್ ನ ಇನ್ನೊಂದು ಫೋಟೋವನ್ನು ಪೋಸ್ಟ್ ಮಾಡಿದೆ.
https://www.facebook.com/NTCouncilTeam/posts/1839831106196872