alex Certify ಅವಳಿ ಸಹೋದರಿಯನ್ನ ಪತ್ತೆ ಹಚ್ಚಿದ ಗುಟ್ಟು ಬಿಚ್ಚಿಟ್ಟ ಯುವತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅವಳಿ ಸಹೋದರಿಯನ್ನ ಪತ್ತೆ ಹಚ್ಚಿದ ಗುಟ್ಟು ಬಿಚ್ಚಿಟ್ಟ ಯುವತಿ

ಟಿಕ್​ಟಾಕ್​​ನಲ್ಲಿ ದಿನಕ್ಕೆ ಅನೇಕ ವಿಡಿಯೋಗಳು ಎಷ್ಟರಮಟ್ಟಿಗೆ ವೈರಲ್​ ಆಗುತ್ತೆ ಅಂದರೆ ಸಾಮಾಜಿಕ ಜಾಲತಾಣದ ಇತರೆ ವೇದಿಕೆಗಳಲ್ಲೂ ಟ್ರೆಂಡ್ ಕ್ರಿಯೇಟ್​ ಮಾಡುತ್ತೆ. ಇಂತಹದ್ದೇ ಒಂದು ವೈರಲ್​ ವಿಡಿಯೋದಲ್ಲಿ ಯುವತಿಯೊಬ್ಬಳು ದೀರ್ಘ ಸಮಯದ ಹಿಂದೆ ಕಳೆದು ಹೋಗಿದ್ದ ತನ್ನ ಅವಳಿ ಸಹೋದರಿಯನ್ನ ವಿಶ್ವ ವಿದ್ಯಾಲಯದಲ್ಲಿ ಕಂಡುಕೊಂಡಿದ್ದೇನೆ ಎಂದು ಹೇಳಿಕೊಂಡಿದ್ದಾಳೆ. ಟಿಕ್​ಟಾಕ್​ ಬಳಕೆದಾರಳಾದ ಏಮಿ ಹ್ಯಾರಿಯಟ್​​ ಎಂಬಾಕೆ ಈ ರೀತಿಯಾದ ವಿಡಿಯೋ ಶೇರ್​ ಮಾಡಿದ್ದಾಳೆ.

ನನಗನಿಸುವ ಪ್ರಕಾರ ನಾನು ದೀರ್ಘಕಾಲದ ಹಿಂದೆ ಕಳೆದುಕೊಂಡಿದ್ದ ಅವಳಿ ಸಹೋದರಿಯನ್ನ ವಿಶ್ವವಿದ್ಯಾಲಯದಲ್ಲಿ ಕಂಡುಕೊಂಡಿದ್ದೇನೆ ಎಂದು ಎನಿಸುತ್ತಿದೆ. ನಾವಿಬ್ಬರು ನೋಡೋಕೆ ಒಂದೇ ತರಹ ಇದ್ದೇವೆ ಎಂದು ಹೇಳುವ ಮೂಲಕ ಆಕೆಯ ಫೋಟೋವನ್ನ ಶೇರ್​ ಮಾಡಿದ್ದಾಳೆ.

ಇನ್ನೊಂದು ವಿಚಿತ್ರ ವಿಚಾರ ಅಂದ್ರೆ ಇವರಿಬ್ಬರ ಹುಟ್ಟಿದ ದಿನಾಂಕ ಕೂಡ ಒಂದು ದಿನ ಹಿಂದೆ ಮುಂದೆ ಇದೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್​ ವೈರಲ್​ ಆಗಿದೆ. ಆದರೆ ಈ ಯುವತಿ ಇನ್ನೂ ಯಾವುದೇ ಡಿಎನ್​ಎ ಪರೀಕ್ಷೆಗೆ ಒಳಗಾಗದ ಕಾರಣ ಈ ವಿಚಾರದ ಅಸಲಿಯತ್ತು ಇನ್ನೂ ಗೊಂದಲಮಯವಾಗಿಯೇ ಇದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...