alex Certify ಅಂಕಲ್ ಪ್ರೀತಿಸಿದ ಅಪ್ರಾಪ್ತೆ, ಆಕ್ರೋಶಗೊಂಡ ಅಪ್ಪನಿಂದಲೇ ಆಘಾತಕಾರಿ ಕೃತ್ಯ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅಂಕಲ್ ಪ್ರೀತಿಸಿದ ಅಪ್ರಾಪ್ತೆ, ಆಕ್ರೋಶಗೊಂಡ ಅಪ್ಪನಿಂದಲೇ ಆಘಾತಕಾರಿ ಕೃತ್ಯ

ಟೆಹರಾನ್: ಮನೆಯಲ್ಲಿ ಮಲಗಿದ್ದ ಮಗಳ ತಲೆಯನ್ನು ಕಡಿದು ತಂದೆಯೇ ಕೊಲೆ ಮಾಡಿದ ಆಘಾತಕಾರಿ ಘಟನೆ ಇರಾನ್ ನ ತಲೇಶಾ ಕೌಂಟಿಯಲ್ಲಿ ನಡೆದಿದೆ.

13 ವರ್ಷದ ರೊಮಿನಾ ಅಶ್ರಫೀ ಕೊಲೆಯಾದ ಇರಾನ್ ಬಾಲಕಿ. ಹರಿತವಾದ ಆಯುಧದಿಂದ ಆಕೆಯ ತಲೆಯನ್ನು ಕತ್ತರಿಸಿ ತಂದೆಯೇ ಕೊಲೆ ಮಾಡಿದ್ದಾನೆ. ಮಧ್ಯ ವಯಸ್ಸಿನ ವ್ಯಕ್ತಿಯನ್ನು ಪ್ರೀತಿಸುತ್ತಿದ್ದ ರೊಮಿನಾ ಆತನೊಂದಿಗೆ ಓಡಿ ಹೋಗಲು ತಯಾರಿ ನಡೆಸಿದ್ದಳು. ಇದರಿಂದ ಮರ್ಯಾದೆ ಹೋಗುತ್ತದೆ ಎಂದು ಭಾವಿಸಿದ ತಂದೆಯೇ ತಲೆ ಕಡಿದು ಕೊಲೆ ಮಾಡಿದ್ದಾನೆ.

ರೊಮಿನಾ ಈ ಹಿಂದೆ 35 ವರ್ಷದ ವ್ಯಕ್ತಿಯೊಂದಿಗೆ ಓಡಿ ಹೋಗಿದ್ದು ಪೊಲೀಸರು ಮಧ್ಯ ಪ್ರವೇಶಿಸಿ ಆಕೆಯನ್ನು ವಶಕ್ಕೆ ಪಡೆದು ಪೋಷಕರಿಗೆ ಒಪ್ಪಿಸಿದ್ದರು. ಮಗಳಿಗೆ ಬುದ್ಧಿವಾದ ಹೇಳಿದ ಪೋಷಕರು ಮನೆಯಲ್ಲಿ ಉಳಿಸಿಕೊಂಡಿದ್ದರು.

ಹೀಗಿದ್ದರೂ ತನ್ನ ಚಾಳಿ ಮುಂದುವರಿಸಿದ್ದ ರೊಮಿನಾ ಮಧ್ಯ ವಯಸ್ಕನನ್ನು ಪ್ರೀತಿಸಿ ಮತ್ತೆ ಮನೆ ಬಿಟ್ಟು ಹೋಗಲು ತಯಾರಿ ನಡೆಸಿದ್ದಳು. ಇದನ್ನು ಅರಿತ ತಂದೆಯೇ ಕೊಲೆ ಮಾಡಿದ್ದಾನೆ. ಆತನನ್ನು ವಶಕ್ಕೆ ಪಡೆಯಲಾಗಿದೆ ಎಂದು ಡಿಸ್ಟ್ರಿಕ್ಟ್ ಗವರ್ನರ್ ಕಜೇಮ್ ರಾಜ್ಮಿ ತಿಳಿಸಿದ್ದಾರೆ. ಮಹಿಳಾ ಆಯೋಗ ಉಪಾಧ್ಯಕ್ಷೆ ಮೌಸ್ ಮೆಹಾ ಎಬ್ತೇಕರ್ ಪ್ರಕರಣದ ವಿಶೇಷ ತನಿಖೆ ನಡೆಸುವಂತೆ ಆದೇಶ ನೀಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...