ಸಮುದ್ರದಲ್ಲಿ ತೇಲಿಬಂದ ಭಾರಿ ಗಾತ್ರದ ಮಂಜುಗಡ್ಡೆ ಏರಲು ಪ್ರಯತ್ನಿಸಿದ ಇಬ್ಬರು ಸಾಹಸಿಗಳು, ಜೀವಾಪಾಯದಿಂದ ಪಾರಾದ ಪ್ರಸಂಗ ನಡೆದಿದೆ.
ಅಪಾಯಕಾರಿ ಟ್ರಕಿಂಗ್ ನಲ್ಲಿ ಪಾಲ್ಗೊಳ್ಳುವ ಹಾರ್ನ್ ಎಂಬ ಸಾಹಸಿ ಕಳೆದ ಮೂವತ್ತು ವರ್ಷಗಳಿಂದಲೂ ಇಂತಹ ಸಾಹಸಗಳನ್ನು ಮಾಡುತ್ತಲೇ ಇದ್ದಾರೆ. ಆದರೆ ಇತ್ತೀಚಿನ ಅವರ ಚಾರಣ ಅವರ ಜೀವವನ್ನೇ ಕೊನೆಯಾಗಿಸುವುದರಲ್ಲಿತ್ತು.
ನಾರ್ವೆ ಮತ್ತು ಉತ್ತರ ಧ್ರುವದ ನಡುವಿನ ದ್ವೀಪ ಸಮೂಹದ ಸುತ್ತಲೂ ನೌಕಾಯಾನ ಮಾಡುತ್ತಿದ್ದ ವೇಳೆ ಅವರ ಕಣ್ಣಿಗೆ ದೈತ್ಯ ಮಂಜುಗಡ್ಡೆ ಕಾಣಿಸಿತು. ಹಾರ್ನ್ ಮತ್ತು ತಂಡದ ಸದಸ್ಯ ಫ್ರೆಡ್ ರೂಕ್ಸ್ ಬೋಟ್ ನಿಂದ ಜಿಗಿದು ಮಂಜುಗಡ್ಡೆ ಗುಡ್ಡವನ್ನು ಏರಲಾರಂಭಿಸಿದರು. ಕೆಲವೊತ್ತು ಎಲ್ಲವೂ ಸರಿಯಾಗಿ ಕಾಣಿಸಿತು ಆದರೆ ಇದ್ದಕ್ಕಿದ್ದಂತೆ ಮಂಜುಗಡ್ಡೆ ತಿರುಗಿ ಕುಸಿಯಲು ಪ್ರಾರಂಭವಾಯಿತು. ಅವರ ಮೇಲೆಯೇ ಉರುಳಿತು. ಅವರಿಬ್ಬರೂ ನೀರೊಳಗೆ ಬಿದ್ದು ಕೂದಲೆಳೆ ಅಂತರದಲ್ಲಿ ಅಲ್ಲಿಂದ ಪಾರಾದರು. ಬೋಟ್ ನಲ್ಲಿದ್ದವರು ಈ ಘಟನೆಯನ್ನು ವಿಡಿಯೋ ಮಾಡಿಕೊಂಡಿದ್ದಾರೆ.
https://www.instagram.com/p/CFMVvtQhLZj/?utm_source=ig_embed