alex Certify ಶಿರಚ್ಚೇದವಾದ ಬುದ್ಧನ ಬೃಹತ್ ಪ್ರತಿಮೆ ಪತ್ತೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಶಿರಚ್ಚೇದವಾದ ಬುದ್ಧನ ಬೃಹತ್ ಪ್ರತಿಮೆ ಪತ್ತೆ

ನೈಋತ್ಯ ಚೀನಾದಲ್ಲಿ ಬುದ್ಧನ ದೈತ್ಯ ಪ್ರತಿಮೆಯೊಂದು ಪತ್ತೆಯಾಗಿದ್ದು ಅದರ ತಲೆ ಭಾಗ ಕಾಣೆಯಾಗಿದೆ.

ಸುಮಾರು 30 ಅಡಿ ಎತ್ತರದ ಈ ಬುದ್ಧನ ಪ್ರತಿಮೆ ಕ್ವಿಂಗ್​ ರಾಜವಂಶಕ್ಕಿಂತಲೂ ಹಿಂದಿನದು ಎಂದು ನಂಬಲಾಗಿದೆ. ಆದರೆ ಇದನ್ನ ಯಾರ ಕಾಲದಲ್ಲಿ ಯಾವಾಗ ನಿರ್ಮಿಸಲಾಯ್ತು ಅನ್ನೋದರ ಬಗ್ಗೆ ಸ್ಪಷ್ಟ ಮಾಹಿತಿ ಲಭ್ಯವಾಗಿಲ್ಲ. ಚಾಂಗ್​ಕಿಂಗ್​ನ ನಾನನ್​ ಜಿಲ್ಲೆಯ 2 ಎತ್ತರದ ವಸತಿ ಕಟ್ಟಡಗಳ ನಡುವೆ ಈ ಬುದ್ಧನ ಪ್ರತಿಮೆ ಪತ್ತೆಯಾಗಿದೆ.

ಪ್ರತಿಮೆಯ ಚಿತ್ರಗಳು ಆನ್​​ಲೈನ್​​ನಲ್ಲಿ ವೈರಲ್​ ಆದ ಬಳಿಕ ಚೀನಾ ಅಧಿಕಾರಿಗಳ ಗಮನ ಸೆಳೆದಿದೆ. ಪ್ರತಿಮೆ ಸಮೀಪದ ನಿವಾಸಿಗಳು ಸ್ಥಳೀಯ ಮಾಧ್ಯಮಕ್ಕೆ ಈ ಬಗ್ಗೆ ಮಾಹಿತಿ ನೀಡಿದ್ದಾರೆ. ನಾನನ್​ ಜಿಲ್ಲೆಯ ಸಾಂಸ್ಕ್ರತಿಕ ಪರಂಪರೆ ಇಲಾಖೆ ಇನ್ನೂ ಶಿಲ್ಪಕಲೆ ಅಧ್ಯಯನ ಮಾಡಿ ಅದರ ಸಂರಕ್ಷಣೆ ಬಗ್ಗೆ ಯೋಚನೆ ಮಾಡಬೇಕಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...