ನೈಋತ್ಯ ಚೀನಾದಲ್ಲಿ ಬುದ್ಧನ ದೈತ್ಯ ಪ್ರತಿಮೆಯೊಂದು ಪತ್ತೆಯಾಗಿದ್ದು ಅದರ ತಲೆ ಭಾಗ ಕಾಣೆಯಾಗಿದೆ.
ಸುಮಾರು 30 ಅಡಿ ಎತ್ತರದ ಈ ಬುದ್ಧನ ಪ್ರತಿಮೆ ಕ್ವಿಂಗ್ ರಾಜವಂಶಕ್ಕಿಂತಲೂ ಹಿಂದಿನದು ಎಂದು ನಂಬಲಾಗಿದೆ. ಆದರೆ ಇದನ್ನ ಯಾರ ಕಾಲದಲ್ಲಿ ಯಾವಾಗ ನಿರ್ಮಿಸಲಾಯ್ತು ಅನ್ನೋದರ ಬಗ್ಗೆ ಸ್ಪಷ್ಟ ಮಾಹಿತಿ ಲಭ್ಯವಾಗಿಲ್ಲ. ಚಾಂಗ್ಕಿಂಗ್ನ ನಾನನ್ ಜಿಲ್ಲೆಯ 2 ಎತ್ತರದ ವಸತಿ ಕಟ್ಟಡಗಳ ನಡುವೆ ಈ ಬುದ್ಧನ ಪ್ರತಿಮೆ ಪತ್ತೆಯಾಗಿದೆ.
ಪ್ರತಿಮೆಯ ಚಿತ್ರಗಳು ಆನ್ಲೈನ್ನಲ್ಲಿ ವೈರಲ್ ಆದ ಬಳಿಕ ಚೀನಾ ಅಧಿಕಾರಿಗಳ ಗಮನ ಸೆಳೆದಿದೆ. ಪ್ರತಿಮೆ ಸಮೀಪದ ನಿವಾಸಿಗಳು ಸ್ಥಳೀಯ ಮಾಧ್ಯಮಕ್ಕೆ ಈ ಬಗ್ಗೆ ಮಾಹಿತಿ ನೀಡಿದ್ದಾರೆ. ನಾನನ್ ಜಿಲ್ಲೆಯ ಸಾಂಸ್ಕ್ರತಿಕ ಪರಂಪರೆ ಇಲಾಖೆ ಇನ್ನೂ ಶಿಲ್ಪಕಲೆ ಅಧ್ಯಯನ ಮಾಡಿ ಅದರ ಸಂರಕ್ಷಣೆ ಬಗ್ಗೆ ಯೋಚನೆ ಮಾಡಬೇಕಿದೆ.