alex Certify ಲಾಕ್ ಡೌನ್ ಬೋರ್ ಹೋಗಿಸಲು ಬಂದಿದೆ ಡೂಡಲ್ ಕ್ವಾರಂಟೈನ್ ಚಾಲೆಂಜ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಲಾಕ್ ಡೌನ್ ಬೋರ್ ಹೋಗಿಸಲು ಬಂದಿದೆ ಡೂಡಲ್ ಕ್ವಾರಂಟೈನ್ ಚಾಲೆಂಜ್

ಲಾಕ್‌ಡೌನ್ ಅವಧಿಯಲ್ಲಿ ಮನೋರಂಜನೆಗಾಗಿ ಜನ ಸಾಮಾಜಿಕ ಜಾಲತಾಣಗಳನ್ನು ಬಳಸಿಕೊಂಡಿದ್ದಾರೆ. ತಮ್ಮನ್ನು ಸದಾ ಕ್ರಿಯಾಶೀಲವಾಗಿಟ್ಟುಕೊಳ್ಳಲು ಸದಾ ಹೊಸ ಚಾಲೆಂಜ್ ಗಳನ್ನು ಇನ್ನೊಬ್ಬರಿಗೆ ನೀಡುತ್ತಿದ್ದಾರೆ‌.

ಇತ್ತೀಚೆಗೆ ಹೆಚ್ಚು ವೈರಲ್ ಆಗುತ್ತಿರುವ ಡೂಡಲ್ ಕ್ವಾರಂಟೈನ್ ಚಾಲೆಂಜ್ ನಿಮ್ಮ ಕಲಾತ್ಮಕತೆಯನ್ನು ಅಭಿವೃದ್ಧಿ ಮಾಡುವಂತಿದೆ.‌

ಒಬ್ಬ ಗೋಡೆಯ ಮೇಲೆ ಖಾಲಿ ಬಿಳಿ ಹಾಳೆಯ ಮೇಲೆ ಚಿತ್ರ ಬಿಡಿಸಬೇಕು. ಆ ಕಲಾಕಾರನ ಬೆನ್ನಿನ ಮೇಲೆ ಬಿಳಿ ಹಾಳೆ ಇಟ್ಟು ಆತ ಏನು ಬಿಡಿಸುತ್ತಿದ್ದಾನೆ ಎಂಬುದನ್ನು ನೋಡದೇ ಕೈಗಳ ಚಲನೆಯ ಅಂದಾಜಿನ ಮೇಲೆ ಚಿತ್ರ ಬಿಡಿಸಬೇಕು.

ಮೊದಲ ವ್ಯಕ್ತಿ ಏನು ಬಿಡಿಸಿದ್ದಾನೆ ಎಂಬುದು ಅರ್ಥವಾಗದೆ ವಿಚಿತ್ರ‌ ಚಿತ್ರಗಳನ್ನು ರಚಿಸುವ ವಿಡಿಯೋಗಳು ಈಗ ಟಿಕ್ ಟಾಕ್ ನಲ್ಲಿ ಪ್ರಾರಂಭವಾದ ಸಾಕಷ್ಟು ವೈರಲ್ ಆಗಿವೆ.
ನೀವು ಈ ಚಾಲೆಂಜ್ ಎಕ್ಸೆಪ್ಟ್ ಮಾಡುವಿರಾ..?

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...