alex Certify ಅಂತಿಮ ಕ್ಷಣ ಎಣಿಸುತ್ತಿದ್ದ ಗ್ರಾಹಕಿಗೆ ರೆಸ್ಟೋರೆಂಟ್ ನಿಂದ ವಿಶಿಷ್ಟ ಸೇವೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅಂತಿಮ ಕ್ಷಣ ಎಣಿಸುತ್ತಿದ್ದ ಗ್ರಾಹಕಿಗೆ ರೆಸ್ಟೋರೆಂಟ್ ನಿಂದ ವಿಶಿಷ್ಟ ಸೇವೆ

ಅಮೆರಿಕ ಬಾಲ್ಟಿಮೋರ್​ ನಗರದಲ್ಲಿರುವ ಎಕಿಬೆನ್​​ ಎಂಬ ಹೆಸರಿನ ರೆಸ್ಟೋರೆಂಟ್ ಗ್ರಾಹಕರ ಆಸೆಯನ್ನ ವಿಶೇಷವಾಗಿ ಪೂರೈಸಿದ ಕಾರಣಕ್ಕೆ ಸಾಮಾಜಿಕ ಜಾಲತಾಣದಲ್ಲಿ ನೆಟ್ಟಿಗರ ಮನಗೆಲ್ಲುತ್ತಿದೆ.

ಸ್ಥಳೀಯ ನಿವಾಸಿಯೊಬ್ಬರು ಈ ರೆಸ್ಟೋರೆಂಟ್​ ಮಾಲೀಕರ ಮಾನವೀಯ ಗುಣದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಶೇರ್​ ಮಾಡಿದ್ದಾರೆ. ಶ್ವಾಸಕೋಶದ ಕ್ಯಾನ್ಸರ್​ನಿಂದ ಬಳಲುತ್ತಿದ್ದ ಮಹಿಳೆಯ ಅಳಿಯನೊಬ್ಬ ಈ ರೆಸ್ಟೋರೆಂಟ್​ಗೆ ಕರೆ ಮಾಡಿದ್ದರು. ನನ್ನ ಅತ್ತೆ ಬಾಲ್ಟಿಮೋರ್​ಗೆ ಭೇಟಿ ನೀಡಿದ್ದಾಗೆಲ್ಲ ನಿಮ್ಮ ರೆಸ್ಟೋರೆಂಟ್​ಗೆ ಭೇಟಿ ನೀಡಿ ತನ್ನಿಷ್ಟದ ಖಾದ್ಯಗಳನ್ನ ಸೇವಿಸುತ್ತಿದ್ದಳು ಎಂದು ಹೇಳಿಕೊಂಡಿದ್ದರು.

ಬೆಚ್ಚಿ ಬೀಳಿಸುವಂತಿದೆ ಚಿಕನ್‌ ಬೇಯಿಸುವ ವಿಧಾನ

ಆದರೆ ಆಕೆ ಈಗ ಕ್ಯಾನ್ಸರ್​ನ ಕೊನೆಯ ಘಟ್ಟದಲ್ಲಿ ಇದ್ದಾಳೆ. ಸಾವಿನ ಕೊನೆಯ ಮೆಟ್ಟಿಲಿನಲ್ಲಿರುವ ಈಕೆ ತನ್ನ ಕೊನೆಯ ಆಸೆಯ ರೂಪದಲ್ಲಿ ಎಕಿಬೆನ್​​ನಿಂದ ತನ್ನಿಷ್ಟದ ಖಾದ್ಯ ಬೇಕು ಎಂದು ಮನವಿ ಮಾಡಿದ್ದಳು. ಹೀಗಾಗಿ ಮಹಿಳೆಯ ಕುಟುಂಬಸ್ಥರು ರೆಸ್ಟೋರೆಂಟ್‌ ​ನ್ನು ಸಂಪರ್ಕಿಸಿದ್ದರು.

ತಮ್ಮ ರೆಸ್ಟೋರೆಂಟ್ ​ನ ನೆಚ್ಚಿನ ಗ್ರಾಹಕಿಯ ಈ ಕೊನೆ ಆಸೆಯನ್ನ ಪೂರೈಸುವ ಸಲುವಾಗಿ ಬರೋಬ್ಬರಿ 6 ಕಿಲೋಮೀಟರ್​ ಪ್ರಯಾಣ ಮಾಡಿ ಆಕೆಯ ಇಷ್ಟದ ಖಾದ್ಯವನ್ನ ತಲುಪಿಸುವಲ್ಲಿ ರೆಸ್ಟೋರೆಂಟ್ ಮಾಲೀಕರು ಯಶಸ್ವಿಯಾಗಿದ್ದಾರೆ. ಈ ಪೋಸ್ಟ್ ಸಾಮಾಜಿಕ ಜಾಲತಾಣದಲ್ಲಿ ಸಖತ್​ ವೈರಲ್​ ಆಗಿದೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...