ನೋಡ ನೋಡುತ್ತಲೇ ಭಯ ಹುಟ್ಟಿಸುಂತೆ ಕಾಣುವ ದಿಗ್ಗಜ ಜೀವಿಗಳಾದ ಗೊರಿಲ್ಲಾಗಳು ಸಾಕಷ್ಟು ಬಾರಿ ತಮ್ಮ ಮೃದು ಸ್ವಭಾವದಿಂದ ಜನರ ಹೃದಯವನ್ನೂ ಗೆಲ್ಲುತ್ತವೆ.
ವೈರಲ್ ಆಗಿರುವ ಈ ವಿಡಿಯೋದಲ್ಲಿ, ಮೃಗಾಲಯದಲ್ಲಿರುವ ಗೊರಿಲ್ಲಾ ಗಾಯಗೊಂಡ ಪಕ್ಷಿಯೊಂದನ್ನು ಕೈಯ್ಯಲ್ಲಿ ಎತ್ತಿಕೊಂಡು, ಅದನ್ನು ಆರೈಕೆ ಮಾಡಿ ಮತ್ತೆ ಹಾರಲು ನೆರವಾಗುತ್ತಿರುವ ದೃಶ್ಯವೊಂದು ವೈರಲ್ ಆಗಿದೆ.
ತನ್ನ ಅಂಗಳದಲ್ಲಿರುವ ಹುಲ್ಲುಗಾವಲಿನಲ್ಲಿ ಅಡ್ಡಾಡುತ್ತಿರುವ ಈ ಗೊರಿಲ್ಲಾ, ನೆಲದ ಮೇಲೆ ಬಿದ್ದಿದ್ದ ಪಕ್ಷಿಯನ್ನು ಎತ್ತಿಕೊಂಡು, ಅದಕ್ಕೇನಾಗಿದೆ ಎಂದು ಪರೀಕ್ಷಿಸಿ ಅದನ್ನು ಮತ್ತೆ ಹಾರಲು ಪ್ರೇರೇಪಿಸುತ್ತಿರುವ ಈ ದೃಶ್ಯ ಬಹಳ ಹೃದಯಸ್ಪರ್ಶಿಯಾಗಿದೆ.
ಆಸ್ಟ್ರೇಲಿಯಾದ ನ್ಯೂ ಸೌತ್ ವೇಲ್ಸ್‌ನಲ್ಲಿ ಈ ವಿಡಿಯೋ ಸೆರೆ ಹಿಡಿಯಲಾಗಿದೆ.