
ಬ್ಲಾಕ್ ಫ್ರೈಡೇ ಸೇಲ್ ಹಾಗೂ ಕೋವಿಡ್ ಲಾಕ್‌ಡೌನ್‌ಗೂ ಮುನ್ನ ಟಾಯ್ಲೆಟ್ ಪೇಪರ್‌ಗಳ ಖರೀದಿಗೆ ಜನ ಯಾವ ಪರಿ ಮುಗಿಬಿದ್ದಿದ್ದರು ಎಂದು ನೀವೆಲ್ಲಾ ನೋಡಿದ್ದೀರಿ. ಇವುಗಳನ್ನೂ ಮೀರಿಸುವ ಮಟ್ಟದಲ್ಲಿ ಜಪಾನ್‌ನ ಗೇಮಿಂಗ್ ಸ್ಟೋರ್ ಒಂದರಲ್ಲಿ ಪ್ಲೇ ಸ್ಟೇಷನ್5 ಖರೀದಿ ಮಾಡಲು ಜನ ಕಿಕ್ಕಿರಿದು ನೆರೆದಿದ್ದರು.
ಟೋಕಿಯೋದ ಡಿಪಾರ್ಟ್‌ಮೆಂಟ್ ಗೇಮಿಂಗ್ ಸ್ಟೋರ್ ಒಂದಕ್ಕೆ ಮುಗಿಬಿದ್ದ ಗೇಮರ್‌ಗಳು ಪ್ಲೇಸ್ಟೇಷನ್5 ಗೇಮ್ ಖರೀದಿ ಮಾಡಲು ನಾಮುಂದು ತಾಮುಂದು ಎಂದು ನೆರೆದಿದ್ದ ವಿಡಿಯೋವೊಂದು ಟ್ವಿಟರ್‌ನಲ್ಲಿ ವೈರಲ್ ಆಗಿದೆ. ಮಾರಾಟಕ್ಕಿದ್ದ ಕೆಲವೇ ಕೆಲವು ಪ್ಲೇ ಸ್ಟೇಷನ್5 ಗೇಮ್ ಪೀಸ್‌ಗಳಿಗೆ ನೂರಾರು ಮಂದಿ ಮುಗಿಬಿದ್ದ ಕಾರಣ ಸೇಲ್ಸ್ ಅನ್ನು ರದ್ದು ಮಾಡಬೇಕಾಗಿ ಬಂದಿದೆ.
ಚಾಕೋಲೇಟ್ ಮೋಟಾರ್ ಸೈಕಲ್ ತಯಾರಿಸಿದ ಮಾಸ್ಟರ್ ಶೆಫ್
ಟೋಕಿಯೋದ ಅಕಿಹಾಬಾರಾ ಶಾಪಿಂಗ್ ಡಿಸ್ಟ್ರಿಕ್ಟ್‌ನಲ್ಲಿರುವ ಈ ಸ್ಟೋರ್‌ನಲ್ಲಿ ಮೊದಲು ಬಂದವರಿಗೆ ಆದ್ಯತೆ ಎಂಬ ನಿಯಮದಲ್ಲಿ ಪ್ಲೇಸ್ಟೇಷನ್ 5 ಮಾರಾಟ ಮಾಡಲು ನಿರ್ಧರಿಸಲಾಗಿತ್ತು. ಜನಸಾಗರವನ್ನು ನಿಯಂತ್ರಿಸಲೆಂದು ಅವರಿಗೆಲ್ಲಾ ಟಿಕೆಟ್‌ಗಳನ್ನು ಕೊಟ್ಟು, ಸಾಲಾಗಿ ಬರುವಂತೆ ಮಾಡಲು ಸ್ಟೋರ್ ಮುಂದಾಯಿತು. ಆದರೂ ಸಹ ಹುಚ್ಚು ಗೇಮರ್‌ಗಳ ಕಾಟ ತಾಳಲಾರದೇ ಸೇಲ್ಸ್ ಅನ್ನೇ ರದ್ದು ಮಾಡಬೇಕಾಗಿ ಬಂತು.
https://twitter.com/AJapaneseDream/status/1355332901240365057?ref_src=twsrc%5Etfw%7Ctwcamp%5Etweetembed%7Ctwterm%5E1355332901240365057%7Ctwgr%5E%7Ctwcon%5Es1_&ref_url=https%3A%2F%2Fwww.news18.com%2Fnews%2Fbuzz%2Fsony-playstation5-gaming-nerds-tokyo-japan-gaming-console-3385529.html
https://twitter.com/yamato__1234/status/1355340748766334979?ref_src=twsrc%5Etfw%7Ctwcamp%5Etweetembed%7Ctwterm%5E1355340748766334979%7Ctwgr%5E%7Ctwcon%5Es1_&ref_url=https%3A%2F%2Fwww.news18.com%2Fnews%2Fbuzz%2Fsony-playstation5-gaming-nerds-tokyo-japan-gaming-console-3385529.html