ಉದ್ಯಮದಲ್ಲಿ ಯಶಸ್ವಿಯಾಗಬೇಕು ಅಂದರೆ ಕ್ರಿಯಾಶೀಲತೆ ಮುಖ್ಯವಾಗಿ ಬೇಕು. ಅದೃಷ್ಟದ ಜೊತೆಗೆ ನಮ್ಮ ಆಲೋಚನೆಗಳು ಗ್ರಾಹಕರಿಗೆ ಇಷ್ಟವಾದರೆ ಮಾತ್ರ ಉದ್ಯಮ ಯಶಸ್ಸಾಗೋಕೆ ಸಾಧ್ಯ.
ಅದೇ ರೀತಿ ಯುಕೆಯ 23 ವರ್ಷದ ಯುವಕನೊಬ್ಬ ವ್ಯರ್ಥವಾದ ಬ್ರೆಡ್ನಿಂದ ಬಿಯರ್ ತಯಾರಿಸುವ ಮೂಲಕ ಉದ್ಯಮದಲ್ಲಿ ಯಶಸನ್ನ ಕಂಡಿದ್ದಾರೆ.
ಸ್ಟೊಯಿಡಿಸ್ ಎಂಬ ಯುಕೆಯ ಇಂಜಿನಿಯರಿಂಗ್ ಯುವಕ ಬ್ಯ್ಯೂ ಎಂಬ ಹೊಸ ಬಿಯರ್ನನ್ನ ಕಂಡುಹಿಡಿದಿದ್ದಾರೆ. ಸೂಪರ್ ಮಾರ್ಕೆಟ್ಗಳಲ್ಲಿ ತಿರಸ್ಕೃತವಾದ ಬ್ರೆಡ್ ಹಾಗೂ ಇತರೆ ಆಹಾರ ಪದಾರ್ಥಗಳಿಂದ ಇದನ್ನ ತಯಾರು ಮಾಡಲಾಗಿದೆಯಂತೆ.
ಕಾರ್ಬನ್ ನೆಗೆಟಿವ್ ಅಂಶ ಹೊಂದಿರುವ ಈ ಬಿಯರ್ ಬಾಯಿಗೆ ರುಚಿ ಕೋಡೋದ್ರ ಜೊತೆಗೆ ವ್ಯರ್ಥ ಆಹಾರ ಪದಾರ್ಥಗಳ ಮರು ಬಳಕೆಗೆ ನೆರವಾಗಿದೆ.
ಯುಕೆಯಲ್ಲಿ ಪ್ರತಿ ವರ್ಷ 1.9 ಮಿಲಿಯನ್ ಟನ್ ಆಹಾರ ವ್ಯರ್ಥವಾಗ್ತಿದೆ ಅಂತಾ ಡಬ್ಲೂ ಆರ್ ಪಿ ಮಾಹಿತಿ ನೀಡಿದೆ. ಈ ನಡುವೆ ವ್ಯರ್ಥ ಆಹಾರ ಪದಾರ್ಥಗಳಿಂದಲೇ ತಯಾರಾಗೋ ಇಂತಹ ಪಾನೀಯಗಳು ಆಹಾರ ಪದಾರ್ಥಗಳು ವ್ಯರ್ಥವಾಗುವುದನ್ನ ಕಡಿಮೆ ಮಾಡಲು ಸಹಾಯಕಾರಿಯಾಗುತ್ತವೆ.