ಟಿಕ್ಟಾಕ್ನಲ್ಲಿ ಪೋಸ್ಟ್ ಆಗುವ ಸಾಕಷ್ಟು ವಿಡಿಯೋಗಳು ಸಾಮಾಜಿಕ ಜಾಲತಾಣದ ಇತರೆ ವೇದಿಕೆಗಳು ವೈರಲ್ ಆಗುತ್ತವೆ. ಇಂತಹದ್ದೇ ಒಂದು ವೈರಲ್ ವಿಡಿಯೋದಲ್ಲಿ ಟಿಕ್ಟಾಕರ್ ಯುವತಿಯೊಬ್ಬಳು ನಾನು ಧರಿಸುವ ಉಡುಪಿನ ಕಾರಣದಿಂದಾಗಿ ನನ್ನ ನೆರೆಮನೆಯವರು ಪೊಲೀಸರನ್ನ ಕರೆಸಿದ್ದಾರೆ ಎಂದು ಹೇಳಿಕೊಂಡಿದ್ದಾಳೆ.
ಅಮೆರಿಕದ ಲಾಸ್ ಎಂಜಲಿಸ್ನ ರೋವಿ ವೇಡ್ ಎಂಬಾಕೆ ಮನೆಯ ಹೊರಗಡೆ ಟಿಕ್ಟಾಕ್ ವಿಡಿಯೋ ಮಾಡುತ್ತಿದ್ದಳು. ಇದನ್ನ ನೋಡಿದ ನೆರೆ ಮನೆಯವರು ಈ ರೀತಿಯ ಅಸಂಬದ್ಧ ಉಡುಪನ್ನ ಧರಿಸಿ ಬೀದಿಯಲ್ಲಿ ನೃತ್ಯ ಮಾಡೋದು ಸರೀನಾ ಎಂದು ಪ್ರಶ್ನೆ ಮಾಡಿದ್ದಾರೆ. ಇದಕ್ಕೆ ರೋವಿ ಸೌಜನ್ಯದಿಂದ ನನಗೆ ಸಾರ್ವಜನಿಕ ಸ್ವತ್ತುಗಳನ್ನ ಬಳಸೋಕೆ ಅಧಿಕಾರ ಇದೆ ಎಂದು ಹೇಳಿದ್ದಾರೆ. ಆದರೆ ಇಷ್ಟಕ್ಕೆ ಸುಮ್ಮನಾಗದ ನೆರೆಮನೆಯವರು ಪೊಲೀಸರಿಗೆ ಕರೆ ಮಾಡಿದ್ದಾರೆ.
ಈ ಮಹಿಳೆ ಬಳಿ ಇದೆ 17 ವರ್ಷ ಹಿಂದಿನ ಮೆಕ್ಡೊನಾಲ್ಡ್ ಬರ್ಗರ್….!
ಮನೆಯ ಹೊರಗಡೆ ಪೊಲೀಸರು ಬಂದಿದ್ದನ್ನ ಕಂಡ ರೋವಿ, ತನ್ನ ಹಾಗೂ ಪೊಲೀಸರ ನಡುವೆ ನಡೆದ ಸಂಭಾಷಣೆಯನ್ನ ರೆಕಾರ್ಡ್ ಮಾಡಿದ್ದು ಅದನ್ನ ಟಿಕ್ಟಾಕ್ನಲ್ಲಿ ಶೇರ್ ಮಾಡಿದ್ದಾರೆ. ಈ ವಿಡಿಯೋ ಬರೋಬ್ಬರಿ 11 ಮಿಲಿಯನ್ ವೀವ್ಸ್ ಪಡೆದುಕೊಂಡಿದೆ .