ತನ್ನ ಲೇಟೆಸ್ಟ್ ಜಾಹೀರಾತು ವೈರಲ್ ಆದ ಮೇಲೆ ಫಿಲಿಪ್ಪೀನ್ಸ್ನ ಸಾಫ್ಟ್ ಡ್ರಿಂಕ್ಸ್ ಬ್ರಾಂಡ್ ಒಂದು ಭಾರೀ ಸುದ್ದಿ ಮಾಡುತ್ತಿದೆ.
ಆರ್ಸಿ ಕೋಲಾದ ಜಾಹೀರಾತಿಗೆ “Nyahahakbkxjbcjhishdishlsab@!!!! Basta RC Cola” ಎಂಬ ಶೀರ್ಷಿಕೆ ಕೊಟ್ಟು ಸಾಮಾಜಿಕ ಜಾಲತಾಣಗಳಲ್ಲಿ ಬಿಡುಗಡೆ ಮಾಡಿದ್ದು ನವೆಂಬರ್ 25ರಿಂದ ಈಚೆಗೆ ಭಾರೀ ಟ್ರೆಂಡ್ ಆಗಿದೆ.
ಅಮ್ಮ-ಮಗನ ಆಪ್ತ ಸಂಭಾಷಣೆಯ ಥೀಮ್ನಲ್ಲಿ ನಡೆಯುವ ಪ್ರಸಂಗವೊಂದನ್ನು ಬ್ಯಾಕ್ ಗ್ರೌಂಡ್ ಮಾಡಿಕೊಂಡು ಈ ಜಾಹೀರಾತನ್ನು ಮಾಡಲಾಗಿದೆ. ನೆಟ್ಟಿಗರಿಂದ ಚಿತ್ರ-ವಿಚಿತ್ರ ಪ್ರತಿಕ್ರಿಯೆಗಳಿಗೆ ಈ ಜಾಹೀರಾತು ಗುರಿಯಾಗಿದೆ.