alex Certify ಕೈಕಾಲು ಕುಣಿಸಿ ಕನಸಿನಲ್ಲಿ ತೇಲಾಡಿದ ಕುದುರೆ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೈಕಾಲು ಕುಣಿಸಿ ಕನಸಿನಲ್ಲಿ ತೇಲಾಡಿದ ಕುದುರೆ…!

ನಾವೇನಾದರು ನಿದ್ರೆಯಲ್ಲಿ ಅಸಾಧ್ಯವಾದ ಕನಸು ಕಂಡರೆ ಸಾಕು, ನಮ್ಮ ಪಾಲಿಗದು ಬಿಸಿಲಕುದುರೆ ಆಗುವುದುಂಟು.

ಆದರೆ, ಕುದುರೆಯೇ ಬಿಸಿಲ ಜೋಂಪಿನಲ್ಲಿ ಮಲಗಿ ಸೊಂಪಾಗಿ ಕನಸು ಕಂಡರೆ ಹೇಗಿರುತ್ತದೆ ?

ಇಂಗ್ಲೆಂಡಿನ ಈ ಕುದುರೆ ಮಲಗಿದಲ್ಲೇ ಏನನ್ನೋ ಕನಸು ಕಾಣತ್ತಾ, ಕನಸಿನ ಲೋಕದಲ್ಲಿ ತೇಲಾಡುತ್ತಾ ಕೈಕಾಲು ಕುಣಿಸುತ್ತಿತ್ತು.

ಇದನ್ನು ಗಮನಿಸಿದವರು ವಿಡಿಯೋ ಮಾಡಿ ಜಾಲತಾಣದಲ್ಲಿ ಹರಿಬಿಟ್ಟಿದ್ದು, ಸಾವಿರಾರು ಜನರು ವೀಕ್ಷಿಸಿದ್ದಾರೆ.

ಅದಕ್ಕಿಂತ ಗಮ್ಮತ್ತಿನ ಸಂಗತಿ ಎಂದರೆ, ಕುದುರೆ ಕನಸು ಕಾಣುವುದನ್ನು ಎಂದಾದರೂ ಗಮನಿಸಿದ್ದೀರಾ ? ಯಾವುದರ ಬಗ್ಗೆ ಕನಸು ಕಾಣುತ್ತಿರಬಹುದು ಎಂಬ ಪ್ರಶ್ನೆಯನ್ನೂ ವಿಡಿಯೋ ಜೊತೆ ಪೋಸ್ಟ್ ಮಾಡಿದ್ದಾರೆ.

ಇದಕ್ಕೆ ನೆಟ್ಟಿಗರು ರಂಜನೀಯ ಕಮೆಂಟ್ ಗಳನ್ನು ಹಾಕಿದ್ದು, ಬೀಚ್ ನಲ್ಲಿ ವಿಹರಿಸುತ್ತಿರಬಹುದು ಎಂದು ಒಬ್ಬರು ಕಮೆಂಟಿಸಿದರೆ, ಹೆಣ್ಣು ಕುದುರೆಯಾದ್ದರಿಂದ ಹುಡುಗಿಯರು ಹೊಸ ಶೂಗಳ ಬಗ್ಗೆ ಕನಸು ಕಾಣುವುದೇ ಹೆಚ್ಚು ಎಂದು ಇನ್ನೊಬ್ಬರು, ರೇಸ್ ನಲ್ಲಿ ಚಿನ್ನದ ಪದಕ‌ ಗೆದ್ದಂತೆ ಕನಸು ಕಾಣುತ್ತಿರಬಹುದು ಎಂದು ಮತ್ತೊಬ್ಬರು ಕಮೆಂಟ್ ಮಾಡಿದ್ದಾರೆ. ಮತ್ತ್ಯಾಕೆ ತಡ ? ನೀವೂ ವಿಡಿಯೋ ನೋಡಿ. ಫನ್ನಿ ಕಮೆಂಟ್ ಮಾಡಿ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...