ಕೊರೊನಾ ವೈರಸ್, ಆರ್ಥಿಕ ಸಂಕಷ್ಟ ಸೇರಿದಂತೆ ಹಲವಾರು ಕಾರಣಗಳಿಂದಾಗಿ 2020 ಬಹುಜನರ ಪಾಲಿಗೆ ಕೆಟ್ಟ ವರ್ಷವಾಗಿ ಪರಿಣಮಿಸಿದೆ. ಪಾಶ್ಚಾತ್ಯ ರಾಷ್ಟ್ರಗಳಲ್ಲಿ 13ನೇ ತಾರೀಖಿನಂದು ಶುಕ್ರವಾರ ಬಂದರೆ ಅದನ್ನ ಅಶುಭ ಎಂದು ನಂಬಲಾಗುತ್ತೆ. ಈ ವರ್ಷ ಈ ರೀತಿಯ ಅಶುಭ ದಿನ 2 ಬಾರಿ ಬಂದಿದೆ.
ಈ ವರ್ಷದ ಮಾರ್ಚ್ 13 ಹಾಗೂ ನವೆಂಬರ್ 13ರಂದು ಶುಕ್ರವಾರ ಬಂದಿದೆ. ಹೀಗಾಗಿಯೇ ಈ ವರ್ಷ ಇಷ್ಟೊಂದು ಅಶುಭವಾಗಿದೆ ಅನ್ನುತ್ತೆ ಪಾಶ್ಚಾತ್ಯ ಸಂಸ್ಕೃತಿ.
ಇತಿಹಾಸಕಾರರು ಹೇಳುವ ಪ್ರಕಾರ 13ನೇ ತಾರೀಖಿನ ಶುಕ್ರವಾರದಂದು ದೇವರುಗಳೆಲ್ಲ ಕೂತು ಊಟ ಮಾಡುತ್ತಿದ್ದಾರೆ. ಕರೆಯದೇ ಬಂದ ಅತಿಥಿಯೊಬ್ಬ ಗುಂಡು ಹಾರಿಸಿ ಒಬ್ಬ ದೇವತೆಯನ್ನ ಬಲಿ ಪಡೆದ ಅಂತಾ ನಾರ್ಸ್ ಪೌರಾಣಿಕ ಕತೆಯಲ್ಲಿ ಉಲ್ಲೇಖಿಸಲಾಗಿದೆ. ಇದರಿಂದ ಭೂಮಿಯಲ್ಲಿ ಕತ್ತಲೆಯಾಯಿತು. ಹೀಗಾಗಿ ಈ ದಿನವನ್ನ ದುರಾದೃಷ್ಟದ ದಿನ ಎಂದು ಪರಿಗಣಿಸಲಾಗುತ್ತೆ.
ಶುಕ್ರವಾರದ 13ನೇ ತಾರೀಖಿನಂದು ಸಾಮಾನ್ಯವಾಗಿ ಜನರು ವಿಮಾನಗಳಲ್ಲಿ ಪ್ರಯಾಣ ಬೆಳೆಸೋದಿಲ್ಲ. ಅನೇಕರು 13ನೇ ಮಹಡಿಯಲ್ಲಿ ಮನೆಯನ್ನ ಕೊಳ್ಳೋಕೂ ಹಿಂಜರಿಯುತ್ತಾರೆ. ಈ ರೀತಿ ಅನೇಕ ಕಾರಣಗಳಿಂದ ಈ 13 ಎಂಬ ಸಂಖ್ಯೆಯೇ ಅಶುಭ ಎನ್ನಲಾಗುತ್ತೆ.