alex Certify ಫ್ಲಾಟ್‌ ನಿಂದ ಹೊರ ಬರಲಾಗದೆ ಪರದಾಡುತ್ತಿದ್ದ ಸ್ಥೂಲಕಾಯದ ವ್ಯಕ್ತಿಗೆ ಕ್ರೇನ್​ ಬಳಸಿ ರಕ್ಷಣೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಫ್ಲಾಟ್‌ ನಿಂದ ಹೊರ ಬರಲಾಗದೆ ಪರದಾಡುತ್ತಿದ್ದ ಸ್ಥೂಲಕಾಯದ ವ್ಯಕ್ತಿಗೆ ಕ್ರೇನ್​ ಬಳಸಿ ರಕ್ಷಣೆ

ಅಪಘಾತದಿಂದಾಗಿ ಮನೆಯಿಂದ ಹೊರಬರಲಾಗದೇ ಕಷ್ಟ ಅನುಭವಿಸುತ್ತಿದ್ದ ಸ್ಥೂಲಕಾಯದ ವ್ಯಕ್ತಿಯನ್ನ ಕ್ರೇನ್​​ ಮೂಲಕ ಸ್ಥಳಾಂತರಿಸಿದ ಘಟನೆ ಫ್ರಾನ್ಸ್​​ನಲ್ಲಿ ನಡೆದಿದೆ.

ಪೆಪಿರ್​ಗ್ನಾನ್​​ನಲ್ಲಿ ನಡೆದ ಕಾರ್ಯಾಚರಣೆಯಲ್ಲಿ 50 ರಕ್ಷಣಾ ಸಿಬ್ಬಂದಿ ಭಾಗಿಯಾದ್ರು. ಫ್ಲ್ಯಾಟ್​​ನಲ್ಲಿ ಸಿಲುಕಿದ್ದ ವ್ಯಕ್ತಿ ಬರೋಬ್ಬರಿ 250ರಿಂದ 300 ಕೆಜಿ ತೂಕ ಹೊಂದಿದ್ದ ಎನ್ನಲಾಗಿದೆ.

ವರ್ಷದ ಹಿಂದೆ ಹಾಸಿಗೆಯಿಂದ ಬಿದ್ದಿದ್ದ ಈತ ಏಳಲಾಗದೇ ನರಕಯಾತನೆ ಅನುಭವಿಸಿದ್ದ. ಡಿಸೆಂಬರ್​ ತಿಂಗಳಲ್ಲಿ ಈತನ ರಕ್ಷಣೆಗೆ ಸಿಬ್ಬಂದಿ ಮುಂದಾಗಿದ್ದರಾದರೂ ರಕ್ಷಣಾ ಕಾರ್ಯ ವಿಫಲವಾಗಿತ್ತು.

ಆದರೆ ಈ ಬಾರಿ ಕ್ರೇನ್​ ಸಹಾಯದಿಂದ ಈತನನ್ನ ಅಪಾರ್ಟ್​ಮೆಂಟ್​​ನಿಂದ ಸ್ಥಳಾಂತರಿಸಲಾಗಿದೆ ಎಂದು ಖಾಸಗಿ ಸುದ್ದಿ ಮಾಧ್ಯಮ ವರದಿ ಮಾಡಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...