ಜರ್ಮನಿಯ ಬರ್ಲಿನ್ ಬಳಿಯ ಝಾಹ್ಲೆನ್ಡಾರ್ಫ್ ಎಂಬಲ್ಲಿ, ಪದೇ ಪದೇ ಕಳುವಾಗುತ್ತಿದ್ದ ಚಪ್ಪಲಿಗಳು ಹಾಗೂ ಶೂಗಳ ಜಾಡು ಹಿಡಿದು ಹೊರಟಾಗ ನರಿರಾಯ ಕಂಡುಬಂದಿದ್ದಾನೆ. ಬಲೇ ಫ್ಯಾಶನ್ ಪ್ರಿಯನಾದ ಈ ನರಿರಾಯನ ಬಳಿ 100ಕ್ಕೂ ಹೆಚ್ಚು ಬಗೆಯ ಶೂಗಳು, ಫ್ಲಿಪ್ ಫ್ಲಾಪ್, ಕ್ರಾಕ್ಸ್ಗಳು ಹಾಗೂ ಟ್ರೇನರ್ಗಳು ಸಿಕ್ಕಿವೆ.
ಕಳೆದ ಕೆಲವು ದಿನಗಳಿಂದ ಈ ಊರಿನ ಜನರಿಗೆ ಕಳುವಾಗುತ್ತಿರುವ ತನ್ನ ಪಾದರಕ್ಷೆಗಳ ಹಿಂದೆ ಯಾರಿದ್ದಾರೆ ಎಂದು ತಿಳಿದುಬಂದಿರಲಿಲ್ಲ. ಆದರೆ, ನರಿರಾಯನು ಈ ಚೇಷ್ಟೆಯನ್ನು ಬಹಳ ದಿನಗಳಿಂದಲೂ ಮಾಡಿಕೊಂಡು ಬಂದಿದ್ದಾನೆ ಎಂದು ಬಳಿಕ ತಿಳಿದುಬಂದಿದೆ.
ನರಿರಾಯನ ಪಾದರಕ್ಷೆಗಳ ಕಲೆಕ್ಷನ್ ಇರುವ ಚಿತ್ರವೊಂದು ಈಗ ವೈರಲ್ ಆಗಿದೆ.