alex Certify ನನಸಾಯ್ತು ಟ್ವಿಟ್ಟರ್‌ ನಲ್ಲಿ 4 ವರ್ಷದ ಹಿಂದೆ ಯುವತಿ ಹಂಚಿಕೊಂಡಿದ್ದ ಕನಸು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನನಸಾಯ್ತು ಟ್ವಿಟ್ಟರ್‌ ನಲ್ಲಿ 4 ವರ್ಷದ ಹಿಂದೆ ಯುವತಿ ಹಂಚಿಕೊಂಡಿದ್ದ ಕನಸು

Four Years Ago a Woman Tweeted About Owning a Bookstore Someday, And Now She Does

ಎಡಿನ್‌ಬರ್ಗ್‌‌: ನಾಲ್ಕು ವರ್ಷದ ಹಿಂದೆ ಯುವತಿಯೊಬ್ಬಳು ಕಂಡ ಕನಸು ಈಗ ನನಸಾಗಿದೆ. ಅದಕ್ಕೆ ಕಾರಣವಾಗಿದ್ದು, ಟ್ವಿಟರ್. ಮಹಿಳೆಯರಿಬ್ಬರು ಟ್ವಿಟರ್ ಮೂಲಕ ಭೇಟಿಯಾಗಿ ತಮ್ಮ ಕನಸು ಹಂಚಿಕೊಂಡು ಪುಸ್ತಕ ಮಳಿಗೆ ಸ್ಥಾಪಿಸಿದ ಅಪರೂಪದ ಕತೆ ಇಲ್ಲಿದೆ.‌

ಸ್ಕಾಟ್ ಲ್ಯಾಂಡ್ ಮೂಲದ ಲೆನ್ನೆ ಬ್ರೌನ್ ಎಂಬುವವರು 2016 ರಲ್ಲಿ ಟ್ವೀಟ್ ಮಾಡಿ, ತನ್ನ ಸ್ವಂತದ ಪುಸ್ತಕ ಮಳಿಗೆಯೊಂದನ್ನು ತೆರೆಯುವ ಬಗ್ಗೆ ಕನಸನ್ನು ಹಂಚಿಕೊಂಡಿದ್ದರು. ಅದನ್ನು ಓದಿದ ಜಾಸ್ಮಿನ್‌ ಎಂಬುವವರು ತಾನೂ ಅಂಥದ್ದೇ ಕನಸು ಹೊಂದಿದ್ದಾಗಿ ಹೇಳಿದ್ದರು‌. ಇಬ್ಬರ ನಡುವೆ ಸಂಭಾಷಣೆಗಳು ನಡೆದಿದ್ದವು.

ಸೆ.15 ರಂದು ಇಬ್ಬರೂ ಸೇರಿ ಸ್ಟರ್ಲಿಂಗ್ ಸ್ಕಾಟ್ ಲ್ಯಾಂಡ್ ಎಂಬಲ್ಲಿ ಬುಕ್ ನುಕ್ ಎಂಬ ಹೆಸರಿನ ಪುಸ್ತಕ‌ ಮಳಿಗೆ ತೆರೆದಿದ್ದಾರೆ. ಅಷ್ಟೇ ಅಲ್ಲ ಮಳಿಗೆಯ ಅಧಿಕೃತ ಟ್ವಿಟರ್ ಖಾತೆ ತೆರೆದಿದ್ದು, ನಾಲ್ಕು ವರ್ಷದ ಹಿಂದೆ ಇಬ್ಬರು ಮಾಲಕಿಯರ ನಡುವೆ ನಡೆದ ಸಂಭಾಷಣೆಗಳ ಸ್ಕ್ರೀನ್ ಶಾಟ್ ನ್ನು ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಟ್ವೀಟ್ ಸಾಕಷ್ಟು ವೈರಲ್ ಆಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...