alex Certify ಅಚ್ಚರಿ: ಈ ಕುಟುಂಬದ ನಾಲ್ಕು ತಲೆಮಾರಿನ ಸದಸ್ಯರಿಗೆ ಇಲ್ಲ ಬೆರಳಚ್ಚು..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅಚ್ಚರಿ: ಈ ಕುಟುಂಬದ ನಾಲ್ಕು ತಲೆಮಾರಿನ ಸದಸ್ಯರಿಗೆ ಇಲ್ಲ ಬೆರಳಚ್ಚು..!

ಬಾಂಗ್ಲಾದೇಶದಲ್ಲಿ ವಾಸವಿರುದ ಕುಟುಂಬದ ನಾಲ್ಕು ತಲೆಮಾರಿನ ಸದಸ್ಯರು ಮೃದುವಾದ ಹಸ್ತವನ್ನ ಹೊಂದಿದ್ದು ಇವರಿಗೆ ಬೆರಳಚ್ಚೇ ಮೂಡಿಲ್ಲವಂತೆ. ಈ ಅಪರೂಪದ ಸ್ಥಿತಿಯನ್ನ ವೈಜ್ಞಾನಿಕ ಭಾಷೆಯಲ್ಲಿ ಅಡೆರ್ಮಟೊಗ್ಲಿಫಿಯಾ ಎಂದು ಕರೆಯಲಾಗುತ್ತೆ. ಬಾಂಗ್ಲಾ ದೇಶದ ಸರ್ಕಾರಿ ಸೌಲಭ್ಯಗಳು ಹಾಗೂ ದಾಖಲಾತಿಗೆ ಬೆರಳಚ್ಚಿನ ಅವಶ್ಯಕತೆ ಅನಿವಾರ್ಯವಾದ್ದರಿಂದ ಈ ಕುಟುಂಬಕ್ಕೆ ಸಂಕಷ್ಟ ಉಂಟಾಗಿದೆ.

22 ವರ್ಷದ ಅಪು ಸರ್ಕಾರ್​ ಹಾಗೂ ಅವರ ತಂದೆ ಅಮಲ್​ ಸರ್ಕಾರ್​ ಬಾಂಗ್ಲಾದೇಶ ಉತ್ತರ ಜಿಲ್ಲೆಯ ರಾಜ್​ ಶಾಹಿ ನಿವಾಸಿಗಳಾಗಿದ್ದಾರೆ. ಇವರ ತಾತನ ಕಾಲದಿಂದಲೇ ಈ ಕುಟುಂಬದ ಯಾರಿಗೂ ಬೆರಳಚ್ಚೇ ಮೂಡಿಲ್ಲವಂತೆ. ಇಲ್ಲಿಯವರೆಗೆ ಅವರಿಗೆ ಈ ಕಾರಣದಿಂದ ಯಾವುದೇ ತೊಡಕು ಉಂಟಾಗಿಲ್ಲವಂತೆ.

ಆದರೆ ಬಯೋಮೆಟ್ರಿಕ್​​ ನ್ನು ಬಳಕೆ ಮಾಡಲು ಆಗೋದೇ ಇಲ್ಲ ಅಂತಾ ಕುಟುಂಬ ಸದಸ್ಯರಾದ ಅಪು ಹಾಗು ಅನು ಬೇಸರ ವ್ಯಕ್ತಪಡಿಸಿದ್ರು.

ಅಡೆರ್ಮಟೊಗ್ಲಿಫಿಯಾ ಸಮಸ್ಯೆ ಹೊಂದಿರುವ ವ್ಯಕ್ತಿಗಳು ಬೆರಳಚ್ಚನ್ನ ಹೊಂದಿರೋದಿಲ್ಲ. ಕುಟುಂಬದ ಈ ಸಮಸ್ಯೆಯನ್ನ ಸರ್ಕಾರಿ ಅಧಿಕಾರಿಗಳಿಗೆ ತಿಳಿಸಲಾಗಿದ್ದು ಕುಟುಂಬ ಸದಸ್ಯರ ರೆಟಿನಾ ಹಾಗೂ ಮುಖ ಸ್ಕ್ಯಾನ್​ ಮಾಡುವ ಮೂಲಕ ಇವರಿಗೆ ಬಯೋಮೆಟ್ರಿಕ್​ ಡಾಟಾ ಐಡಿಯನ್ನ ನೀಡಲಾಗುತ್ತಿದೆಯಂತೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...