ಐಷಾರಾಮಿ ಬೆಂಜ್ ಕಾರುಗಳನ್ನ ಧ್ವಂಸ ಮಾಡಿದ ಮಾಜಿ ಉದ್ಯೋಗಿ..! 05-01-2021 1:42PM IST / No Comments / Posted In: Latest News, International ಅಸಮಾಧಾನಗೊಂಡಿದ್ದ ಮರ್ಸಿಡೀಸ್ ಬೆಂಜ್ನ ಮಾಜಿ ಸಿಬ್ಬಂದಿಯೊಬ್ಬ ಸ್ಪೇನ್ನಲ್ಲಿರುವ ಬೆಂಜ್ ಕಂಪನಿ ಮೇಲೆ ದಾಳಿ ನಡೆಸಲು ಯತ್ನಿಸಿದ ಆರೋಪದಡಿಯಲ್ಲಿ ಬಂಧನಕ್ಕೆ ಒಳಗಾಗಿದ್ದಾನೆ. 38 ವರ್ಷದ ಮಾಜಿ ಉದ್ಯೋಗಿ ತಾನು ಕೆಲಸ ಮಾಡುತ್ತಿದ್ದ ಕಾರ್ಖಾನೆಯಲ್ಲಿ 50 ಹೊಚ್ಚ ಹೊಸ ಕಾರುಗಳನ್ನ ನಾಶ ಮಾಡಿದ್ದಾನೆ. ಇದರಿಂದ ಕಂಪನಿಗೆ ಬರೋಬ್ಬರಿ 6 ಮಿಲಿಯನ್ ಡಾಲರ್ ಮೌಲ್ಯದ ಹಾನಿ ಉಂಟಾಗಿದೆ ಎನ್ನಲಾಗಿದೆ. ಡಿಸೆಂಬರ್ 3ರಂದು ಕಾರ್ಖಾನೆಗೆ ಕದ್ದ ಜೆಸಿಬಿ ಸಮೇತ ನುಗ್ಗಿದ ಆರೋಪಿ ಬಾಸ್ಕ್ ರಾಜಧಾನಿ ವಿಟೋರಿಯಾದಲ್ಲಿನ ಕೈಗಾರಿಕಾ ಕಾರ್ಖಾನೆಯಲ್ಲಿದ್ದ ಹಲವಾರು ಐಷಾರಾಮಿ ವಾಹನಗಳನ್ನ ಹಾನಿಗೊಳಪಡಿಸಿದ್ದಾನೆ. ಹಾನಿಗೊಳಗಾದ ಕಾರುಗಳಲ್ಲಿ ಉನ್ನತ ಮಟ್ಟದ ವಿ ಕ್ಲಾಸ್ ಮಾದರಿಯ ವಾಹನಗಳೂ ಸೇರಿವೆ. ಇವೆಲ್ಲ ಸುಮಾರು 90000 ಪೌಂಡ್ ಮೌಲ್ಯದ್ದಾಗಿವೆ. ಸೋಶಿಯಲ್ ಮೀಡಿಯಾದಲ್ಲಿ ಹಾನಿಗೊಳಿಗಾದ ಕಾರುಗಳ ಫೋಟೋ ವೈರಲ್ ಆಗ್ತಿದೆ. ದಾಳಿ ಎಷ್ಟು ತೀವ್ರವಾಗಿತ್ತೆಂದರೆ, ಪೊಲೀಸರಿಗಾಗಿ ಕಾಯುತ್ತಿರುವಾಗ ಶಂಕಿತನನ್ನು ತಡೆಯಲು ಭದ್ರತಾ ಸಿಬ್ಬಂದಿಯೊಬ್ಬರು ಗಾಳಿಯಲ್ಲಿ ಗುಂಡು ಹಾರಿಸಬೇಕಾಯಿತು. La Ertzaintza detiene a un hombre de 38 años, ex trabajador de la empresa, que tras robar una excavadora, ha destrozado más de 50 furgonetas de la fábrica de Mercedes-Vitoria. Más en @radioeuskadi pic.twitter.com/13Mpo4PlqR — Dani Álvarez (@DaniAlvarezEiTB) December 31, 2020