alex Certify ಇಂಡೋನೇಷಿಯಾದಲ್ಲಿ ಮಾಸ್ಕ್​ ಹಾಕದ ವಿದೇಶಿಗರಿಗೆ ಸಿಗುತ್ತೆ ಈ ಶಿಕ್ಷೆ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಇಂಡೋನೇಷಿಯಾದಲ್ಲಿ ಮಾಸ್ಕ್​ ಹಾಕದ ವಿದೇಶಿಗರಿಗೆ ಸಿಗುತ್ತೆ ಈ ಶಿಕ್ಷೆ…!

ಇಂಡೋನೇಷಿಯಾದ ಬಾಲಿಯ ರೆಸಾರ್ಟ್​ ಒಂದರಲ್ಲಿ ಮಾಸ್ಕ್​ ಹಾಕದೇ ತಿರುಗಾಡ್ತಿದ್ದ ವಿದೇಶಿಗರಿಗೆ ಪೊಲೀಸರು ವಿಭಿನ್ನ ಶಿಕ್ಷೆಯೊಂದನ್ನ ನೀಡಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ವಿಡಿಯೋದಲ್ಲಿ ಟೀ ಶರ್ಟ್​ ಹಾಗೂ ಶಾರ್ಟ್ಸ್ ಹಾಕಿರುವ ವಿದೇಶಿಗ ಪುಶಪ್​ ಮಾಡ್ತಿರೋದನ್ನ ನೀವು ಕಾಣಬಹುದಾಗಿದೆ. ಈತ ಬೆವರಿಳಿಸಿಕೊಂಡು ಪುಶಪ್​ ಮಾಡ್ತಿರೋದನ್ನ ಪೊಲೀಸರು ಕೂಡ ನೋಡ್ತಿದ್ದಾರೆ.

ಇಂಡೋನೇಷಿಯಾದಲ್ಲಿ ಕೊರೊನಾ ವೈರಸ್​ ನಿಯಂತ್ರಣಕ್ಕಾಗಿ ಕಳೆದ ವರ್ಷದಿಂದಲೇ ಮಾಸ್ಕ್​ ಬಳಕೆಯನ್ನ ಕಡ್ಡಾಯಗೊಳಿಸಲಾಗಿದೆ. ಆದರೆ ಕಳೆದ ಕೆಲ ದಿನಗಳಿಂದ ಬಾಲಿಗೆ ಪ್ರವಾಸಕ್ಕೆ ಬರುವ ವಿದೇಶಿಗರು ಮಾಸ್ಕ್​ ಇಲ್ಲದೇ ಓಡಾಡುತ್ತಿರೋದು ಗಮನಕ್ಕೆ ಬಂದಿದೆ.

ಈಗಾಗಲೇ 70 ಕ್ಕೂ ಹೆಚ್ಚು ಮಂದಿ ಮಾಸ್ಕ್​ ಧರಿಸಿದ ಕಾರಣಕ್ಕೆ ದಂಡ ಕಟ್ಟಿದ್ದಾರೆ. ಸುಮಾರು 30 ಮಂದಿ ತಮ್ಮ ಬಳಿ ಹಣ ಇಲ್ಲ ಎಂದು ಹೇಳಿಕೊಂಡಿದ್ದಾರೆ. ಹಣ ಕಟ್ಟಲಾಗದವರಿಗೆ ಪೊಲೀಸರು ಈ ಪುಶಪ್​ ಶಿಕ್ಷೆಯನ್ನ ನೀಡ್ತಾರೆ. ಮಾಸ್ಕ್​​ನ್ನೇ ಧರಿಸದವರಿಗೆ 50 ಪುಶಪ್​ ಹಾಗೂ ಸರಿಯಾಗಿ ಮಾಸ್ಕ್​ ಹಾಕದವರ ಕೈಲಿ 15 ಪುಶಪ್​ಗಳನ್ನ ಮಾಡಿಸಲಾಗುತ್ತೆ .

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...