ಇಂಡೋನೇಷಿಯಾದ ಬಾಲಿಯ ರೆಸಾರ್ಟ್ ಒಂದರಲ್ಲಿ ಮಾಸ್ಕ್ ಹಾಕದೇ ತಿರುಗಾಡ್ತಿದ್ದ ವಿದೇಶಿಗರಿಗೆ ಪೊಲೀಸರು ವಿಭಿನ್ನ ಶಿಕ್ಷೆಯೊಂದನ್ನ ನೀಡಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ವಿಡಿಯೋದಲ್ಲಿ ಟೀ ಶರ್ಟ್ ಹಾಗೂ ಶಾರ್ಟ್ಸ್ ಹಾಕಿರುವ ವಿದೇಶಿಗ ಪುಶಪ್ ಮಾಡ್ತಿರೋದನ್ನ ನೀವು ಕಾಣಬಹುದಾಗಿದೆ. ಈತ ಬೆವರಿಳಿಸಿಕೊಂಡು ಪುಶಪ್ ಮಾಡ್ತಿರೋದನ್ನ ಪೊಲೀಸರು ಕೂಡ ನೋಡ್ತಿದ್ದಾರೆ.
ಇಂಡೋನೇಷಿಯಾದಲ್ಲಿ ಕೊರೊನಾ ವೈರಸ್ ನಿಯಂತ್ರಣಕ್ಕಾಗಿ ಕಳೆದ ವರ್ಷದಿಂದಲೇ ಮಾಸ್ಕ್ ಬಳಕೆಯನ್ನ ಕಡ್ಡಾಯಗೊಳಿಸಲಾಗಿದೆ. ಆದರೆ ಕಳೆದ ಕೆಲ ದಿನಗಳಿಂದ ಬಾಲಿಗೆ ಪ್ರವಾಸಕ್ಕೆ ಬರುವ ವಿದೇಶಿಗರು ಮಾಸ್ಕ್ ಇಲ್ಲದೇ ಓಡಾಡುತ್ತಿರೋದು ಗಮನಕ್ಕೆ ಬಂದಿದೆ.
ಈಗಾಗಲೇ 70 ಕ್ಕೂ ಹೆಚ್ಚು ಮಂದಿ ಮಾಸ್ಕ್ ಧರಿಸಿದ ಕಾರಣಕ್ಕೆ ದಂಡ ಕಟ್ಟಿದ್ದಾರೆ. ಸುಮಾರು 30 ಮಂದಿ ತಮ್ಮ ಬಳಿ ಹಣ ಇಲ್ಲ ಎಂದು ಹೇಳಿಕೊಂಡಿದ್ದಾರೆ. ಹಣ ಕಟ್ಟಲಾಗದವರಿಗೆ ಪೊಲೀಸರು ಈ ಪುಶಪ್ ಶಿಕ್ಷೆಯನ್ನ ನೀಡ್ತಾರೆ. ಮಾಸ್ಕ್ನ್ನೇ ಧರಿಸದವರಿಗೆ 50 ಪುಶಪ್ ಹಾಗೂ ಸರಿಯಾಗಿ ಮಾಸ್ಕ್ ಹಾಕದವರ ಕೈಲಿ 15 ಪುಶಪ್ಗಳನ್ನ ಮಾಡಿಸಲಾಗುತ್ತೆ .