ಮಾರ್ಚ್ 8ರಂದು ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಆಚರಿಸಲಾಗುತ್ತದೆ. ಜಗತ್ತಿನಾದ್ಯಂತ ವಿವಿಧ ಕ್ಷೇತ್ರಗಳಲ್ಲಿ ಮಹಿಳೆಯರ ಸಾಧನೆಗಳನ್ನು ಸನ್ಮಾನಿಸಲು ಈ ದಿನವನ್ನು ಮೀಸಲಿಡಲಾಗಿದೆ.
ಇದೇ ದಿನದಂದು ನೇಪಾಳದಲ್ಲಿ ಜರುಗಿದ ವಿಶಿಷ್ಟ ಕಾರ್ಯಕ್ರಮವೊಂದು ನೆಟ್ಟಿಗರ ಗಮನ ಸೆಳೆದಿದೆ. ಇಲ್ಲಿನ ದೇವ್ಘಾಟ್ ಗ್ರಾಮ ಸಭೆ ಆಯೋಜಿಸಿದ್ದ ಸ್ಫರ್ಧೆಯೊಂದರಲ್ಲಿ ಮಹಿಳೆಯರು ತಮ್ಮ ಪತಿಯಂದಿರನ್ನು ಹೆಗಲ ಮೇಲೆ ಹೊತ್ತು ರೇಸ್‌ನಲ್ಲಿ ಭಾಗವಹಿಸಿದ್ದರು.
ಲವ್, ಸೆಕ್ಸ್, ದೋಖಾ: ಮದುವೆಯಾಗುವುದಾಗಿ ದೈಹಿಕ ಸಂಬಂಧ ಬೆಳೆಸಿ ಕೈಕೊಟ್ಟ ಪ್ರಿಯಕರನ ವಿರುದ್ಧ ದೂರು
ವಿವಿಧ ವಯೋಮಾನಕ್ಕೆ ಸೇರಿದ 16 ಮಹಿಳೆಯರು ಈ ಓಟದಲ್ಲಿ ಭಾಗಿಯಾಗಿ, ತಂತಮ್ಮ ಪತಿಯರನ್ನು ಹೆಗಲ ಮೇಲೆ ಹೊತ್ತು 100 ಮೀಟರ್ ಓಟದಲ್ಲಿ ಭಾಗಿಯಾಗಿದ್ದಾರೆ. ಮಾಮೂಲಿ ರೇಸ್‌ಗಳಂತೆ ಈ ಸ್ಫರ್ಧೆಯಲ್ಲಿ ಗೆದ್ದವರಿಗೆ ಯಾವುದೇ ಬಹುಮಾನ ಕೊಟ್ಟಿಲ್ಲ. ಬದಲಾಗಿ ಭಾಗವಹಿಸಿದ ಪ್ರಮಾಣ ಪತ್ರಗಳನ್ನು ಕೊಡಲಾಗಿದೆ.
“ಹಿಂದೆಲ್ಲಾ ಮಹಿಳೆಯರು ತಮ್ಮ ಪತಿಯರ ಮನೆಗಳಿಗೆ ಹೋಗಿ ಅಲ್ಲಿನ ಮನೆಗೆಲಸಗಳನ್ನು ಮಾಡುತ್ತಿದ್ದರು ಹಾಗೂ ಅವರು ಹೆಚ್ಚು ಓದುತ್ತಿರಲಿಲ್ಲ. ಆದರೆ ಇತ್ತೀಚಿನ ದಿನಗಳಲ್ಲಿ ಮಹಿಳೆಯರು ಪುರುಷರಿಗಿಂತ ಯಾವುದೇ ವಿಧದಲ್ಲೂ ಸಹ ಕಡಿಮೆ ಇಲ್ಲ ಎಂಬ ಸಂದೇಶ ರವಾನೆ ಮಾಡಲು ಈ ಓಟ ಆಯೋಜಿಸಿದ್ದೇವೆ” ಎಂದು ಗ್ರಾಮ ಸಭೆಯ ಮುಖ್ಯಸ್ಥ ದುರ್ಗಾ ಬಹದ್ದೂರ್ ಥಾಪಾ ತಿಳಿಸಿದ್ದಾರೆ.