ಹೆರಿಗೆ ನೋವಿನ ನಡುವೆಯೂ ಗರ್ಭಿಣಿ ಅಮೆರಿಕ ಅಧ್ಯಕ್ಷೀಯ ಚುನಾವಣೆಗೆ ಮತ ಚಲಾಯಿಸುವ ಮೂಲಕ ಎಲ್ಲರಿಗೂ ಮಾದರಿಯಾಗಿದ್ದಾರೆ.
ಫ್ಲೋರಿಡಾದ ಮತದಾನ ಕೇಂದ್ರಕ್ಕೆ ಪತಿಯೊಂದಿಗೆ ಬಂದ ಮಹಿಳೆ ಆಗಲೇ ಹೆರಿಗೆ ನೋವಿನಿಂದ ಬಳಲುತ್ತಿದ್ದರು ಅಂತಾ ಖಾಸಗಿ ಸುದ್ದಿ ವಾಹಿನಿಗಳು ವರದಿ ಮಾಡಿವೆ.
ಕಾರಿನೊಳಗೆ ಹೆರಿಗೆ ನೋವು ಅನುಭವಿಸುತ್ತಿದ್ದ ಮಹಿಳೆ ಮತ ಚಲಾಯಿಸುವವರೆಗೆ ಆಸ್ಪತ್ರೆಗೆ ಹೋಗಲು ನಿರಾಕರಿಸಿದ್ದಾರೆ ಅಂತಾ ಚುನಾವಣಾ ಸಿಬ್ಬಂದಿ ಕರೇನ್ ಬ್ರಿಸೆನೊ ಗೊನ್ಜಾಲೆಜ್ ಹೇಳಿದ್ದಾರೆ. ಈ ವಿಚಾರ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದ್ದಂತೆ ನೆಟ್ಟಿಗರು ಗರ್ಭಿಣಿಗೆ ಸಲಾಂ ಹೊಡೆದಿದ್ದಾರೆ.