alex Certify ಕೊರೊನಾ ನಿಯಂತ್ರಣಕ್ಕಾಗಿ ಚೀನಾದಲ್ಲಿ ‘ಡೈಪರ್​’ ನಿಯಮ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೊರೊನಾ ನಿಯಂತ್ರಣಕ್ಕಾಗಿ ಚೀನಾದಲ್ಲಿ ‘ಡೈಪರ್​’ ನಿಯಮ..!

ಕೊರೊನಾ ವೈರಸ್​ ಹರಡುವ ಭಯದ ನಡುವೆಯೂ ವಿಮಾನಯಾನ ಕೈಗೊಳ್ಳಲಿಚ್ಚಿಸುವ ಪ್ರಯಾಣಿಕರ ಸುರಕ್ಷತೆಗಾಗಿ ಅನೇಕ ಏರ್​ ಲೈನ್ಸ್ ಕಂಪನಿಗಳು ಸೋಂಕು ತಡೆಯಲು ಸಾಕಷ್ಟು ಮುಂಜಾಗ್ರತಾ ಕ್ರಮಗಳನ್ನ ಕೈಗೊಂಡಿವೆ.

ಸಾಮಾಜಿಕ ಅಂತರ ಕಾಪಾಡಲು ಕೆಲ ವಿಮಾನಗಳಲ್ಲಿ ಪ್ರಯಾಣಿಕರ ಸಂಖ್ಯೆಯನ್ನೇ ಕಡಿಮೆ ಮಾಡಲಾಗಿದೆ. ಮಾಸ್ಕ್​ ಹಾಗೂ ಗ್ಲೌಸ್​ ಕಡ್ಡಾಯ, ಕೊರೊನಾ ನೆಗೆಟಿವ್​ ರಿಪೋರ್ಟ್ ಹೀಗೆ ಸಾಕಷ್ಟು ಮುಂಜಾಗ್ರತಾ ಕ್ರಮಗಳನ್ನ ವಿಮಾನಯಾನ ಸಂಸ್ಥೆಗಳು ಕೈಗೊಂಡಿವೆ.

ಆದರೆ ಚೀನಾ ವಿಮಾನಯಾನ ಸಂಸ್ಥೆ ಮಾತ್ರ ಪ್ರಯಾಣಿಕರ ಸುರಕ್ಷತೆಗಾಗಿ ಅತಿರೇಕದ ಮಾರ್ಗಸೂಚಿಗಳನ್ನ ಹೊರಡಿಸಿದೆ. ಸಿವಿಲ್​ ಏವಿಯೇಷನ್​ ಆಫ್​ ಚೀನಾ ಬಿಡುಗಡೆ ಮಾಡಿದ ಹೊಸ ಮಾರ್ಗಸೂಚಿಗಳ ಪ್ರಕಾರ ಕೊರೊನಾ ಸೋಂಕನ್ನ ನಿಯಂತ್ರಿಸುವ ಸಲುವಾಗಿ ಡೈಪರ್​ ಬಳಕೆ ಮಾಡುವಂತೆ ಪ್ರಯಾಣಿಕರಿಗೆ ಸೂಚನೆ ನೀಡಲಾಗಿದೆಯಂತೆ.

ಸಾಂಕ್ರಾಮಿಕ ರೋಗವನ್ನ ತಡೆಗಟ್ಟಲು 49 ಪುಟಗಳ ಮಾರ್ಗಸೂಚಿಯನ್ನ ಸಿದ್ಧಪಡಿಸಲಾಗಿದ್ದು ಇದರಲ್ಲಿ ಡೈಪರ್​ ಬಳಕೆ ನಿಯಮವೂ ಸೇರಿದೆ. ಮಾಸ್ಕ್​, ಗ್ಲೌಸ್​, ಫೇಸ್​ ಶೀಲ್ಡ್​, ಬಿಸಾಡಬಹುದಾದ ಶೂ ಕವರ್​ ಜೊತೆಗೆ ಶೌಚಾಲಯ ಬಳಕೆ ಕಡಿಮೆ ಮಾಡುವ ಸಲುವಾಗಿ ಡೈಪರ್​ ನಿಯಮ ಕೂಡ ಸೇರಿಕೊಂಡಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...