ಈಜಿಪ್ಟ್ ನಲ್ಲಿ ಟಿಕ್‌ಟಾಕ್ ಮತ್ತು ಇನ್ಸ್ಟ್ರಾಗ್ರಾಮ್ ನಂತಹ ಸಾಮಾಜಿಕ ಜಾಲತಾಣದ ಸ್ಟಾರ್ಸ್ ಮೇಲೆ ಕಾನೂನು ಕ್ರಮ ಮುಂದುವರೆದಿದೆ. ಸಾರ್ವಜನಿಕ ನೈತಿಕತೆಯನ್ನು ಉಲ್ಲಂಘಿಸಿದ್ದಕ್ಕಾಗಿ ಈಜಿಪ್ಟ್ ನ್ಯಾಯಾಲಯವು 5 ಟಿಕ್ ಟಾಕ್ ಲಲನೆಯರಿಗೆ ಶಿಕ್ಷೆ ವಿಧಿಸಿದೆ. 5 ಸ್ಟಾರ್ಸ್ ಗೆ ತಲಾ 2 ವರ್ಷಗಳ ಜೈಲು ಶಿಕ್ಷೆಯಾಗಿದೆ.
ನ್ಯಾಯಾಲಯದ ಪ್ರಕಾರ, ಟಿಕ್ ಟಾಕ್ ಮತ್ತು ಇತರ ಸಾಮಾಜಿಕ ಜಾಲತಾಣಗಳಲ್ಲಿ ಈ ಹುಡುಗಿಯರು ಹಂಚಿಕೊಂಡ ವಿಡಿಯೊಗಳು ಮತ್ತು ಚಿತ್ರಗಳು ಇಸ್ಲಾಂ ವಿರುದ್ಧವಾಗಿದೆ. ಕಡಿಮೆ ಬಟ್ಟೆ ಧರಿಸಿ ಯುವತಿಯರು ವಿಡಿಯೋ ಮಾಡಿದ್ದಾರೆ ಎಂಬ ಆರೋಪವಿದೆ.
ಈ ಹುಡುಗಿಯರಿಗೆ 19,000 ಯುಎಸ್ ಡಾಲರ್ ದಂಡ ವಿಧಿಸಲಾಗಿದೆ. ಸಾಮಾಜಿಕ ನಿಯಮ ಉಲ್ಲಂಘನೆ ಮಾಡದಂತೆ ಸಾಕಷ್ಟು ಎಚ್ಚರಿಕೆ ನೀಡಲಾಗಿತ್ತು. ಆದ್ರೆ ಹುಡುಗಿಯರು ನಿಯಮ ಉಲ್ಲಂಘನೆ ಮಾಡಿದ್ದಾರೆ. ಈಜಿಪ್ಟ್ ನ ಕೆಲ ಜನರು ಹುಡುಗಿಯರ ಪರ ಹೋರಾಟ ಶುರು ಮಾಡಿದ್ದಾರೆ.