alex Certify ಅತ್ಯಪರೂಪದ ಬಿಳಿ ಶಾರ್ಕ್ ಫೋಟೋ ವೈರಲ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅತ್ಯಪರೂಪದ ಬಿಳಿ ಶಾರ್ಕ್ ಫೋಟೋ ವೈರಲ್

ಬ್ರಿಟನ್ ಕಡಲತೀರದಲ್ಲಿ 50 ವರ್ಷದ ಮೀನುಗಾರರೊಬ್ಬರು ಅತ್ಯಪರೂಪದ ಸಂಪೂರ್ಣ ಬಿಳಿ ಬಣ್ಣದ ಶಾರ್ಕ್ ಒಂದನ್ನು ಹಿಡಿದಿದ್ದಾರೆ.

ಹ್ಯಾಂಪ್‌ಶೈರ್‌ನ ಜೇಸನ್ ಗಿಲೆಸ್ಪಿ ಹೆಸರಿನ ಈ ವ್ಯಕ್ತಿ ತಾನು ಹಿಡಿದ ಶಾರ್ಕ್‌ ನ್ನು ಮರಳಿ ನೀರಿಗೆ ಬಿಡುವುದಾಗಿ ಹೇಳಿದ್ದು, ಈ ಅಪರೂಪದ ಕ್ಯಾಚ್ ‌ಅನ್ನು ಕೆಲ ನಿಮಿಷಗಳ ಕಾಲ ಕೈಯಲ್ಲಿ ಹಿಡಿದುಕೊಂಡು ಅದರೊಂದಿಗೆ ಒಂದಷ್ಟು ಫೋಟೋಗಳನ್ನು ತೆಗೆಸಿಕೊಂಡಿದ್ದಾಗಿ ಹೇಳಿದ್ದಾರೆ.

ತಾನು 30 ವರ್ಷಗಳಿಂದ ಮೀನು ಹಿಡಿಯುತ್ತಿದ್ದು ತನ್ನ ಜೀವಿತದಲ್ಲಿ ಇಂಥ ಶಾರ್ಕ್ ‌ಅನ್ನು ಹಿಂದೆಂದೂ ಕಂಡಿದ್ದು ನೆನಪಿಲ್ಲ ಎಂದು ಜೇಸನ್ ತಿಳಿಸಿದ್ದಾರೆ. ಶಾರ್ಕ್‌ ಅನ್ನು ಹಿಡಿದ ನಿಮಿಷದೊಳಗೆ ಅದರೊಂದಿಗೆ ಕೆಲ ಚಿತ್ರಗಳನ್ನು ತೆಗೆದುಕೊಂಡು ಅದನ್ನು ಮರಳಿ ನೀರಿಗೆ ಬಿಡಲಾಗಿದೆ.

How cool is that? Albino tope caught by Jason Gillespie off the South Coast of England

Posted by Offshore Angler on Wednesday, September 30, 2020

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...