ಬ್ರಿಟನ್ ಕಡಲತೀರದಲ್ಲಿ 50 ವರ್ಷದ ಮೀನುಗಾರರೊಬ್ಬರು ಅತ್ಯಪರೂಪದ ಸಂಪೂರ್ಣ ಬಿಳಿ ಬಣ್ಣದ ಶಾರ್ಕ್ ಒಂದನ್ನು ಹಿಡಿದಿದ್ದಾರೆ.
ಹ್ಯಾಂಪ್ಶೈರ್ನ ಜೇಸನ್ ಗಿಲೆಸ್ಪಿ ಹೆಸರಿನ ಈ ವ್ಯಕ್ತಿ ತಾನು ಹಿಡಿದ ಶಾರ್ಕ್ ನ್ನು ಮರಳಿ ನೀರಿಗೆ ಬಿಡುವುದಾಗಿ ಹೇಳಿದ್ದು, ಈ ಅಪರೂಪದ ಕ್ಯಾಚ್ ಅನ್ನು ಕೆಲ ನಿಮಿಷಗಳ ಕಾಲ ಕೈಯಲ್ಲಿ ಹಿಡಿದುಕೊಂಡು ಅದರೊಂದಿಗೆ ಒಂದಷ್ಟು ಫೋಟೋಗಳನ್ನು ತೆಗೆಸಿಕೊಂಡಿದ್ದಾಗಿ ಹೇಳಿದ್ದಾರೆ.
ತಾನು 30 ವರ್ಷಗಳಿಂದ ಮೀನು ಹಿಡಿಯುತ್ತಿದ್ದು ತನ್ನ ಜೀವಿತದಲ್ಲಿ ಇಂಥ ಶಾರ್ಕ್ ಅನ್ನು ಹಿಂದೆಂದೂ ಕಂಡಿದ್ದು ನೆನಪಿಲ್ಲ ಎಂದು ಜೇಸನ್ ತಿಳಿಸಿದ್ದಾರೆ. ಶಾರ್ಕ್ ಅನ್ನು ಹಿಡಿದ ನಿಮಿಷದೊಳಗೆ ಅದರೊಂದಿಗೆ ಕೆಲ ಚಿತ್ರಗಳನ್ನು ತೆಗೆದುಕೊಂಡು ಅದನ್ನು ಮರಳಿ ನೀರಿಗೆ ಬಿಡಲಾಗಿದೆ.
https://www.facebook.com/permalink.php?story_fbid=1264649193901751&id=381775965522416