ಅಮೆರಿಕದ ಹೆಸರಾಂತ ಗಗನಯಾತ್ರಿ ನೀಲ್ ಆರ್ಮ್ಸ್ಟ್ರಾಂಗ್ ಚಂದ್ರನ ಅಂಗಳದಲ್ಲಿ ತೆಗೆದ ಸೆಲ್ಫಿ ಫೋಟೋವೊಂದು ಕ್ರೀಸ್ಟ್ನಲ್ಲಿ ಹರಾಜಿಗಿಡಲಾದ ಸಾವಿರಾರು ಫೋಟೋಗ್ರಫಿ ಸಾಲಿನಲ್ಲಿ ಇಡಲಾಗಿದೆ.
ಸುಮಾರು 2400ಕ್ಕೂ ಹೆಚ್ಚು ಬಾಹ್ಯಾಕಾಶದ ಫೋಟೋಗಳನ್ನ ಈ ಸಾಲಿನಲ್ಲಿ ಇಡಲಾಗಿದೆ. ಅಲ್ಲದೇ ಈ ಚಿತ್ರಗಳನ್ನ ನೋಡ್ತಾ ಇದ್ದರೆ ನಿಮಗೇನೆ ನಾನು ಚಂದ್ರನ ಮೈ ಮೇಲೆ ಇದ್ದೇನೆ ಅಂದು ಭಾಸವಾಗುತ್ತೆ ಅಂತಾ ಕ್ರಿಸ್ಟೀ ಹೇಳಿದೆ.
ಖಾಸಗಿ ಚಿತ್ರ ಸಂಗ್ರಾಹಕ ವಿಕ್ಟರ್ ಮಾರ್ಟಿನ್ ಮಾಲ್ಬುರೆಟ್ ದಶಕಗಳಿಂದ ಸಂಗ್ರಹಿಸಿದ್ದ ವಾಯೇಜ್ ಟು ಅನದರ್ ವಲ್ಡ್ ಎಂಬ ಸಂಗ್ರಹದಲ್ಲಿ ಇಂತಹ ಅಪ್ರತಿಮ ಚಿತ್ರಗಳು ದೊರಕಿವೆ.
ನೀಲ್ ಆರ್ಮಸ್ಟ್ರಾಂಗ್ ಚಂದ್ರನ ಮೈಮೇಲೆ ಕಾಲಿಟ್ಟ ಮೊದಲ ಮಾನವ ಎಂಬ ಕೀರ್ತಿಗೆ ಪಾತ್ರರಾಗಿದ್ದವರು. ತನ್ನ ಇಬ್ಬರು ಸಿಬ್ಬಂದಿಯಾದ ಆಲ್ಟ್ರಿನ್ ಹಾಗೂ ಮೈಕ್ ಕಾಲಿನ್ಸ್ ಜೊತೆ ಚಂದ್ರನ ಅಂಗಳದಲ್ಲಿ ಮೊದಲ ಹೆಜ್ಜೆ ಇಟ್ಟಿದ್ದ ನೀಲ್, ಇದು ಮನುಷ್ಯನ ಪಾಲಿಗೆ ಒಂದು ಚಿಕ್ಕ ಹೆಜ್ಜೆ ಆದರೆ ಮಾನವಕುಲಕ್ಕೆ ಇದೊಂದು ದೊಡ್ಡ ಹೆಜ್ಜೆ ಎಂದು ಹೇಳಿದ್ದರಂತೆ.
ಚಂದ್ರಯಾನದ ಬಳಿಕ ನಾಸಾ ಬಿಡುಗಡೆ ಮಾಡಿದ ಚಿತ್ರಗಳಲ್ಲಿ ಆರ್ಮ್ಸ್ಟ್ರಾಂಗ್ ಇರಲಿಲ್ಲ. ಅವರು ಚಂದ್ರನ ಫೋಟೋಗಳನ್ನ ತೆಗೆಯೋದರಲ್ಲೇ ಬ್ಯುಸಿಯಾಗಿದ್ದರಂತೆ. ಸದ್ಯ ನೀಲ್ ಆರ್ಮ್ಸ್ಟ್ರಾಂಗ್ರ ಈ ಚಿತ್ರ 29,11,174.50 ರೂಪಾಯಿಗೆ ಮಾರಾಟವಾಗುವ ಸಾಧ್ಯತೆ ಇದೆ.