ದಕ್ಷಿಣ ಕೊರಿಯಾದಲ್ಲಿ ಬೆಕ್ಕಿನ ಮರಿಯೊಂದು ಕೊರೊನಾ ಸೋಂಕಿಗೆ ಒಳಗಾಗಿದೆ. ಅಲ್ಲದೇ ದಕ್ಷಿಣ ಕೊರಿಯಾದಲ್ಲಿ ಪ್ರಾಣಿಗಳಲ್ಲಿ ಕೊರೊನಾ ಸೋಂಕು ಬೆಳಕಿಗೆ ಬಂದ ಮೊದಲ ಪ್ರಕರಣ ಇದಾಗಿದೆ.
ದಕ್ಷಿಣ ಜಿಯೊಂಗ್‌ಸಾಂಗ್ ಪ್ರಾಂತ್ಯದ ಆಗ್ನೇಯ ನಗರವಾದ ಜಿಂಜುವಿನಲ್ಲಿರುವ ಧಾರ್ಮಿಕ ಕೇಂದ್ರವೊಂದರಲ್ಲಿ ಈ ಸೋಂಕು ವರದಿಯಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಕೊರೊನಾ ಹರಡುವಿಕೆ ಸಂಬಂಧ ನಡೆಸಲಾದ ಇತ್ತೀಚಿನ ಟ್ರ್ಯಾಕಿಂಗ್ನಲ್ಲಿ ಸಾಕುಪ್ರಾಣಿಯೊಂದು ಕೊರೊನಾ ಸೋಂಕಿಗೆ ಒಳಗಾಗಿದೆ ಅನ್ನೋದನ್ನ ಆರೋಗ್ಯ ಅಧಿಕಾರಿಗಳು ಕನ್ಫರ್ಮ್ ಮಾಡಿದ್ದಾರೆ.
ಧಾರ್ಮಿಕ ಕೇಂದ್ರದಲ್ಲಿ ತಾಯಿ ಬೆಕ್ಕು ಹಾಗೂ ಎರಡು ಮರಿ ಬೆಕ್ಕುಗಳನ್ನ ಸಾಕಲಾಗಿತ್ತು. ಈ ಎರಡು ಮರಿಗಳಲ್ಲಿ ಒಂದು ಮರಿ ಸೋಂಕಿಗೆ ಒಳಗಾಗಿದೆ. ತಾಯಿ ಬೆಕ್ಕು ಕೂಡ ಕೊರೊನಾ ಸೋಂಕಿಗೆ ಒಳಗಾಗಿದೆ. ಬೆಕ್ಕಿನ ಮಾಲೀಕರನ್ನೂ ಪರೀಕ್ಷೆಗೆ ಒಳಪಡಿಸುವಂತೆ ಪ್ರಧಾನಿ ಸೂಚನೆ ನೀಡಿದ್ದಾರೆ .