ಹಿಮದಲ್ಲಿ ಸಿಲುಕಿದ್ದ ಬಾತುಕೋಳಿ ಮರಿಯೊಂದರ ರಕ್ಷಣೆಗೆ ಮುಂದಾದ ಬ್ರಿಯಾಣ್ ಮರ್ಕ್ಲೆ ಹಾಗೂ ಎಡ್ ಬೆಲ್ಮನ್ ಹೆಸರಿನ ಫೈರ್ ಫೈಟರ್‌ಗಳು ವಿನೋದಮಯ ಪ್ರಸಂಗವೊಂದಕ್ಕೆ ಸಿಲುಕಿದ್ದಾರೆ.
ಮಿಷಿಗನ್‌ನ ರಯ್ಸಿನ್ ನದಿಯ ಹೆಪ್ಪುಗಟ್ಟಿದ ನೀರಿನಲ್ಲಿ ಬಾತುಕೋಳಿ ಮರಿಯೊಂದು ಗಾಯಗೊಂಡು ಬಿದ್ದು ಎರಡು ದಿನಗಳು ಕಳೆದಿವೆ ಎಂದು ಮನ್ರೋ ಟೌನ್‌ಶಿಪ್‌ನ ಅಗ್ನಿಶಾಮಕ ಇಲಾಖೆಗೆ ಕರೆ ಬಂದಿದೆ. ಕೂಡಲೇ ರಕ್ಷಣಾ ಕಾರ್ಯಕ್ಕೆ ಅಗತ್ಯವಿದ್ದ ಸಕಲ ಉಪಕರಣಗಳನ್ನೂ ತೆಗೆದುಕೊಂಡು ಮೆರ್ಕ್ಲೆ ಹಾಗೂ ಬೆಲ್‌ಮ್ಯಾನ್ ಸ್ಥಳಕ್ಕೆ ಧಾವಿಸಿದ್ದಾರೆ.
ರೈಲ್ವೇ ಹಾಗೂ ಸಾಮಾನ್ಯ ʼಬಜೆಟ್ʼ ವಿಲೀನವಾಗಿದ್ದರ ಹಿಂದಿದೆ ಈ ಪ್ರಮುಖ ಕಾರಣ
ಪಕ್ಷಿಯ ಹತ್ತಿರ ಬಂದು ನೋಡಿದಾಗ ಅದು ನಿಜವಾದ ಪಕ್ಷಿಯಲ್ಲ, ಬದಲಾಗಿ ಗೊಂಬೆ ಎಂದು ತಿಳಿದು ಬಂದಿದೆ. ಆದರೂ ಸಹ ಈ ಗೊಂಬೆಯನ್ನೂ ಹಿಮದಿಂದ ಎತ್ತಿಕೊಂಡು ಬಂದಿದ್ದಾರೆ ಅಗ್ನಿಶಾಮಕ ಸಿಬ್ಬಂದಿ.
https://www.facebook.com/brian.merkle.54/posts/10158993514532418