alex Certify ಕೋಳಿ ಕಾಳಗ ತಡೆದ ಪೊಲೀಸ್​ ಅಧಿಕಾರಿ ಬರ್ಬರ ಹತ್ಯೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೋಳಿ ಕಾಳಗ ತಡೆದ ಪೊಲೀಸ್​ ಅಧಿಕಾರಿ ಬರ್ಬರ ಹತ್ಯೆ

ಕಾನೂನು ಬಾಹಿರವಾಗಿ ನಡೆಯುತ್ತಿದ್ದ ಕೋಳಿ ಕಾಳಗವನ್ನ ನಿಲ್ಲಿಸಿದ ಪೊಲೀಸ್​ ಅಧಿಕಾರಿಯನ್ನೇ ಕೊಲೆಗೈದ ದಾರುಣ ಘಟನೆ ಫಿಲಿಫೈನ್ಸ್​ನಲ್ಲಿದೆ ನಡೆದಿದೆ.

ಕರೊನಾ ವೈರಸ್​ ಸೋಂಕು ನಿಯಂತ್ರಣಕ್ಕೋಸ್ಕರ ಜನರು ಒಂದೆಡೆ ಸೇರೋದನ್ನ ನಿಷೇಧಿಸಲಾಗಿದೆ. ಹೀಗಾಗ್ಯೂ ಸಹ ಉತ್ತರ್​ ಸಮರ್​ ಪ್ರಾಂತ್ಯದ ಮಡುಗಾಂಗ್​ ಎಂಬಲ್ಲಿ ಕೋಳಿ ಕಾಳಗ ಏರ್ಪಡಿಸಲಾಗಿತ್ತು. ಈ ಚಟುವಟಿಕೆಯನ್ನ ನಿಲ್ಲಿಸಿದ ಸ್ಯಾನ್​ಜೋಸ್​ ಪುರಸಭೆ ಠಾಣೆಯ ಉಸ್ತುವಾರಿ ಲೆ. ಕ್ರಿಶ್ಚಿಯನ್​​ ಬೊಲೊಕ್​​ ಅವರನ್ನ ಹತ್ಯೆಗೈಯಲಾಗಿದೆ.

ಹಕ್ಕಿಗಳನ್ನ ಮುಟ್ಟುಗೋಲು ಹಾಕಲು ಮುಂದಾಗುತ್ತಿದ್ದಂತೆ 30ರ ಹರೆಯದ ಅಧಿಕಾರಿಗೆ ಬ್ಲೇಡ್​ನಿಂದ ಇರಿಯಲಾಗಿದೆ. ರಕ್ತದ ಮಡುವಿನಲ್ಲಿ ಬಿದ್ದಿದ್ದ ಅಧಿಕಾರಿಯನ್ನ ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಲಾಯ್ತಾದರೂ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...