ಕ್ಯಾಲಿಫೋರ್ನಿಯಾ: ಜ್ವರ, ಕೆಮ್ಮು, ಸ್ನಾಯುಗಳ ನೋವು ಕೊರೊನಾ ರೋಗದ ಲಕ್ಷಣಗಳು ಎಂದು ತಜ್ಞರು ರೋಗದ ಕುರಿತು ಪರಿಷ್ಕೃತ ಮಾಹಿತಿ ಬಿಡುಗಡೆ ಮಾಡಿದ್ದಾರೆ.
ಇದು ವೈದ್ಯಕೀಯ ಸಿಬ್ಬಂದಿಗೆ ರೋಗವನ್ನು ಗುರುತಿಸಲು ಹಾಗೂ ರೋಗಿಗಳು ತಕ್ಷಣ ಐಸೋಲೇಶನ್ ಆಗಿ, ಇನ್ನೊಬ್ಬರಿಗೆ ಸೋಂಕು ಹರಡುವುದನ್ನು ಹಾಗೂ ಉತ್ತಮ ಚಿಕಿತ್ಸೆ ಪಡೆಯಲು ಪರಿಷ್ಕೃತ ಮಾರ್ಗಸೂಚಿಗಳು ಹೆಚ್ಚಿನ ಅನುಕೂಲವಾಗಲಿವೆ.
ಪಬ್ಲಿಕ್ ಹೆಲ್ತ್ ಎಂಬ ಜನರ್ಲ್ ನಲ್ಲಿ ಸಂಶೋಧನೆಯ ವಿವರಗಳನ್ನು ಪ್ರಕಟಿಸಲಾಗಿದೆ. ಫೆಬ್ರವರಿ 16 ರಿಂದ 24 ರವರೆಗೆ ಚೀನಾದಲ್ಲಿ ಕೊರೊನಾ ವೈರಸ್ ಖಚಿತವಾದ ಸುಮಾರು 55 ಸಾವಿರ ಜನರ ಹೇಳಿಕೆಗಳನ್ನು ಪಡೆದ ಡಬ್ಲುಎಚ್‌ಒ ಡೇಟಾವನ್ನು ಆಧರಿಸಿ ಈ ಸಂಶೋಧನಾ ವರದಿಯನ್ನು ವಿಶ್ಲೇಷಿಸಲಾಗಿದೆ.
‘ವರದಿಯು ಆಸ್ಪತ್ರೆಯ ಐಸೋಲೇಶನ್ ಅವಧಿಯನ್ನು ಕಡಿಮೆ ಮಾಡಲು ಅನುಕೂಲವಾಗಲಿದೆ. ರೋಗಿಯ ಸ್ಥಿತಿ ಹದಗೆಡದಂತೆ ವೈದ್ಯರು ಚಿಕಿತ್ಸೆ ನೀಡಲು ಈ ಅಧ್ಯಯನ ಅನುಕೂಲವಾಗಲಿದೆ’ ಎಂದು ಅಧ್ಯಯನದ ನೇತೃತ್ವ ವಹಿಸಿದ್ದ ದಕ್ಷಿಣ ಕ್ಯಾಲಿಫೋರ್ನಿಯಾ ವಿಶ್ವ ವಿದ್ಯಾಲಯದ (ಯುಎಸ್‌ಸಿ) ಮೆಡಿಸಿನ್ ಮತ್ತು ಬಯೊ ಮೆಡಿಕಲ್ ಇಂಜಿನಿಯರಿಂಗ್ ವಿಭಾಗದ ಪ್ರೊಫೆಸರ್ ಪೀಟರ್ ಕುಹ್ನ್ ಹೇಳಿದ್ದಾರೆ.