alex Certify ಕೆಲಸ ಮಾಡಿಕೊಡಲು‌ ಮೇಕೆ ಗಿಫ್ಟ್ ಪಡೆದ ಅಧಿಕಾರಿ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೆಲಸ ಮಾಡಿಕೊಡಲು‌ ಮೇಕೆ ಗಿಫ್ಟ್ ಪಡೆದ ಅಧಿಕಾರಿ…!

ಅರಿಜೋನಾ ಮೂಲದ ಅಧಿಕಾರಿಯೊಬ್ಬರು ರೈತರು ಕೇಳಿದ‌ ನೀರಾವರಿ ಕೆಲಸ ಮುಗಿಸಿಕೊಡಲು ಮೇಕೆಯನ್ನು ಗಿಫ್ಟ್ ರೂಪದಲ್ಲಿ ಪಡೆದಿದ್ದಾರೆ‌ ಎನ್ನುವ ಆರೋಪ ಕೇಳಿಬಂದಿದೆ.

ಈ ರೀತಿ ರೈತರಿಂದ ಗಿಫ್ಟ್ ಪಡೆದು ಕೆಲಸ ಮಾಡಿರುವ ವ್ಯಕ್ತಿ ಫ್ರಾಂಕ್ ಸ್ಟೀವನ್ಸ್ ಎಂದು ಹೇಳಲಾಗಿದೆ. ಈತ ಅರಿಜೋನಾ ಸರಕಾರಿ ಅಧಿಕಾರಿಗಳನ್ನು ಬಳಸಿಕೊಂಡು ನಗರದ ಹೊರಗಿನ ಕೆಲಸವನ್ನು ಮಾಡಿಸಿದ್ದಾರೆ ಎನ್ನುವ ಆರೋಪ ಕೇಳಿ ಬಂದಿದೆ.

ಈ ಬಗ್ಗೆ ರೈತರು ಮಾತನಾಡಿದ್ದು, ಸ್ಟೀವನ್ಸ್ ಅವರಿಗೆ ಪ್ರಾಣಿಗಳೆಂದರೆ ಇಷ್ಟ. ಆದ್ದರಿಂದ ಅವರಿಗೆ ನಮ್ಮ ಕೆಲಸ ಮಾಡಿಕೊಡಲು ಮೇಕೆಯನ್ನು ನೀಡಿದೆವು‌ ಎಂದಿದ್ದಾರೆ. ಆದರೆ ಈಗಾಗಲೇ ಸ್ಟೀವನ್ಸ್ ನಿವೃತ್ತಿಯಾಗಿರುವುದರಿಂದ ಅವರ ನಂಬರ್ ಸದ್ಯಕ್ಕೆ ಸಿಗುತ್ತಿಲ್ಲ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...