ಅರಿಜೋನಾ ಮೂಲದ ಅಧಿಕಾರಿಯೊಬ್ಬರು ರೈತರು ಕೇಳಿದ ನೀರಾವರಿ ಕೆಲಸ ಮುಗಿಸಿಕೊಡಲು ಮೇಕೆಯನ್ನು ಗಿಫ್ಟ್ ರೂಪದಲ್ಲಿ ಪಡೆದಿದ್ದಾರೆ ಎನ್ನುವ ಆರೋಪ ಕೇಳಿಬಂದಿದೆ.
ಈ ರೀತಿ ರೈತರಿಂದ ಗಿಫ್ಟ್ ಪಡೆದು ಕೆಲಸ ಮಾಡಿರುವ ವ್ಯಕ್ತಿ ಫ್ರಾಂಕ್ ಸ್ಟೀವನ್ಸ್ ಎಂದು ಹೇಳಲಾಗಿದೆ. ಈತ ಅರಿಜೋನಾ ಸರಕಾರಿ ಅಧಿಕಾರಿಗಳನ್ನು ಬಳಸಿಕೊಂಡು ನಗರದ ಹೊರಗಿನ ಕೆಲಸವನ್ನು ಮಾಡಿಸಿದ್ದಾರೆ ಎನ್ನುವ ಆರೋಪ ಕೇಳಿ ಬಂದಿದೆ.
ಈ ಬಗ್ಗೆ ರೈತರು ಮಾತನಾಡಿದ್ದು, ಸ್ಟೀವನ್ಸ್ ಅವರಿಗೆ ಪ್ರಾಣಿಗಳೆಂದರೆ ಇಷ್ಟ. ಆದ್ದರಿಂದ ಅವರಿಗೆ ನಮ್ಮ ಕೆಲಸ ಮಾಡಿಕೊಡಲು ಮೇಕೆಯನ್ನು ನೀಡಿದೆವು ಎಂದಿದ್ದಾರೆ. ಆದರೆ ಈಗಾಗಲೇ ಸ್ಟೀವನ್ಸ್ ನಿವೃತ್ತಿಯಾಗಿರುವುದರಿಂದ ಅವರ ನಂಬರ್ ಸದ್ಯಕ್ಕೆ ಸಿಗುತ್ತಿಲ್ಲ.