ತಮ್ಮ ಮನೆಯ ಬಚ್ಚಲುಮನೆಯಲ್ಲಿದ್ದ ಕನ್ನಡಿಯು ಫ್ರಾನ್ಸ್ನ ಕೊನೆಯ ರಾಣಿ ಮಾರಿ ಆಂಟೊನಿಯೇಗೆ ಸೇರಿದ್ದು ಎಂದು ತಿಳಿದ ಕುಟುಂಬವೊಂದು ಭಾರೀ ಅಚ್ಚರಿಗೀಡಾಗಿದೆ.
19 ಇಂಚು x 15 ಇಂಚು ವಿಸ್ತಾರವಿರುವ ಈ ಕನ್ನಡಿಯು ಬ್ರಿಟನ್ನ ಬ್ರಿಸ್ಟಾಲ್ನಲ್ಲಿ ನಡೆಯಲಿರುವ ಹರಾಜಿನಲ್ಲಿ 8 ಸಾವಿರ ಪೌಂಡ್ಗಳಷ್ಟಾದರೂ ಬೆಲೆ ಬಾಳುವ ನಿರೀಕ್ಷೆಯನ್ನು ಡೇಲಿ ಮೇಲ್ ವರದಿಯಲ್ಲಿ ಅಂದಾಜು ಮಾಡಲಾಗಿದೆ.
18ನೇ ಶತಮಾನಕ್ಕೆ ಸೇರಿದ ಈ ಕನ್ನಡಿಯನ್ನು 19ನೇ ಶತಮಾನದ ವಾಲ್ನಟ್ ಫ್ರೇಮ್ನಲ್ಲಿ ಸೇರಿಸಲಾಗಿದೆ. ಈ ಕನ್ನಡಿಯನ್ನು ನೆಪೋಲಿಯನ್ನ ಮೂರನೇ ಮಡದಿ ಖರೀದಿಸಿದ್ದರು ಎಂದು ನಂಬಲಾಗಿದೆ.