alex Certify ಶಂಕೆ ಮೇಲೆ ಮನೆ ರೇಡ್ ಮಾಡಿದ ಪೊಲೀಸರಿಗೆ ಕಾದಿತ್ತು ಅಚ್ಚರಿ….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಶಂಕೆ ಮೇಲೆ ಮನೆ ರೇಡ್ ಮಾಡಿದ ಪೊಲೀಸರಿಗೆ ಕಾದಿತ್ತು ಅಚ್ಚರಿ….!

ಸಾಕಷ್ಟು ಬಾರಿ ಏನೋ ಅವಘಡ ಸಂಭವಿಸುತ್ತಿದೆ ಎಂದುಕೊಂಡು ಆ ಜಾಗಕ್ಕೆ ಹೋಗಿ ನೋಡಿದಾಗ ನಮಗೆ ಬಹಳ ಅಚ್ಚರಿಯಾಗುವ ಮಟ್ಟಿಗೆ ಅಲ್ಲೇನೂ ಆಗೇ ಇರುವುದಿಲ್ಲ.

ಇಂಥದ್ದೇ ಒಂದು ನಿದರ್ಶನದಲ್ಲಿ ಜರ್ಮನಿಯ ಕೊಲೋನ್‌ನ ಪೊಲೀಸರು ಫೂಲ್ ಆಗಿದ್ದಾರೆ. ಭಾರೀ ಸದ್ದಿನ ಗನ್‌ ಶಾಟ್‌ಗಳನ್ನು ಕೇಳಿಸಿದ ಬಳಿಕ, ತಮ್ಮ ಏರಿಯಾದಲ್ಲಿ ಶೂಟಿಂಗ್ ನಡೆಯುತ್ತಿದೆ ಎಂದು ಅಲ್ಲಿನ ವಾಸಿಗಳು ನೀಡಿದ ದೂರಿನನ್ವಯ ಸ್ಥಳಕ್ಕೆ ಆಗಮಿಸಿದ ಪೊಲೀಸರು, ಅಲ್ಲಿರುವ ಎರಡು ಅಪಾರ್ಟ್‌ಮೆಂಟ್‌ಗಳನ್ನು ಶೋಧಿಸಲು ಆರಂಭಿಸಿದ್ದಾರೆ.

ಸದ್ದು ಬರುತ್ತಿರವ ಜಾಡನ್ನು ಅರಸಿಕೊಂಡು, ಶಂಕಾಸ್ಪದ ಅಪಾರ್ಟ್‌ಮೆಂಟ್‌ ಒಂದರ ಬಾಗಿಲು ಒಡೆದು ನೋಡಿದ ಪೊಲೀಸರಿಗೆ ಬಲೇ ಅಚ್ಚರಿ ಕಾದಿದೆ. ಆ ಮನೆಯಲ್ಲಿದ್ದ ವ್ಯಕ್ತಿ ಹೆಚ್ಚು ವಾಲ್ಯೂಮ್‌ನಲ್ಲಿ ಆಕ್ಷನ್ ಸಿನೆಮಾವೊಂದನ್ನು ನೋಡುತ್ತಿದ್ದ…! ಆತನನ್ನು ಠಾಣೆಗೆ ಕರೆದೊಯ್ದ ಪೊಲೀಸರು, ಆತನ ಇಹಪರಗಳನ್ನು ಪರಿಶೀಲಿಸಿ, ಆ ಮನೆ ಆತನದ್ದೇ ಎಂದು ಖಾತ್ರಿಪಡಿಸಿಕೊಂಡು ಬಿಟ್ಟು ಕಳುಹಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...