alex Certify ಬಿಡೆನ್​ ಶ್ವೇತ ಭವನಕ್ಕೆ ಎಂಟ್ರಿ ವೇಳೆ ಸಂಸ್ಕೃತ ಶ್ಲೋಕ ಪಠಣೆ..! ಫ್ಯಾಕ್ಟ್​​ ಚೆಕ್​​ನಲ್ಲಿ ಬಯಲಾಯ್ತು ವಿಡಿಯೋ ಅಸಲಿಯತ್ತು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬಿಡೆನ್​ ಶ್ವೇತ ಭವನಕ್ಕೆ ಎಂಟ್ರಿ ವೇಳೆ ಸಂಸ್ಕೃತ ಶ್ಲೋಕ ಪಠಣೆ..! ಫ್ಯಾಕ್ಟ್​​ ಚೆಕ್​​ನಲ್ಲಿ ಬಯಲಾಯ್ತು ವಿಡಿಯೋ ಅಸಲಿಯತ್ತು

ಅಮೆರಿಕ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಜೋ ಬಿಡೆನ್​ ಶ್ವೇತ ಭವನಕ್ಕೆ ಎಂಟ್ರಿ ಕೊಡುತ್ತಿರುವ ವೇಳೆ ಸಂಸ್ಕೃತ ಶ್ಲೋಕವನ್ನ ಪಠಿಸಿದಂತಹ ವಿಡಿಯೋ ಫೇಸ್​ಬುಕ್​ನಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗಿದೆ.

ಅಮೆರಿಕ ಅಧ್ಯಕ್ಷರ ಸ್ವಾಗತದ ವೇಳೆ ಹಿಂದೂ ಸಂಸ್ಕೃತಿಯನ್ನ ಬಳಕೆ ಮಾಡಲಾಗಿದೆ ಅಂತಾ ಅನೇಕರು ಈ ವಿಡಿಯೋಗೆ ಕ್ಯಾಪ್ಶನ್​ ನೀಡಿದ್ದರು. ಆದರೆ ಫ್ಯಾಕ್ಟ್ ಚೆಕ್​ ವೇಳೆ ಈ ವಿಡಿಯೋದ ಅಸಲಿ ಸತ್ಯ ಬಯಲಾಗಿದೆ. ವೈರಲ್​ ಆಗಿರುವ ಈ ಕ್ಲಿಪ್​ 2014ರದ್ದು ಎನ್ನಲಾಗಿದ್ದು, ಶ್ವೇತಭವನದಲ್ಲಿ ಮಹಾತ್ಮಾ ಗಾಂಧಿ ಜನ್ಮದಿನವನ್ನ ಆಚರಿಸುತ್ತಿರುವ ದೃಶ್ಯವಾಗಿದೆ.

30 ಸೆಕೆಂಡ್​ಗಳ ವಿಡಿಯೋವನ್ನ ನವೆಂಬರ್​ 20, 2020ರಂದು ಫೇಸ್​​ಬುಕ್​ ಹರಿಬಿಡಲಾಗಿದೆ. ಫೇಸ್ಬುಕ್ನಲ್ಲಿಲಿ ಈ ವಿಡಿಯೋವನ್ನ ಪೋಸ್ಟ್ ಮಾಡಿರುವ ಬಳಕೆದಾರರು, ಅಮೆರಿಕದ ಶ್ವೇತಭವನದಲ್ಲಿ ನಡೆಯುತ್ತಿರುವ ಸಮಾರಂಭ ಇದಾಗಿದೆ. ಅಧ್ಯಕ್ಷರಾಗಿ ಶ್ವೇತ ಭವನಕ್ಕೆ ಮೊದಲ ಬಾರಿಗೆ ಆಗಮಿಸಿದ ಬಿಡೆನ್​​ಗೆ ಸಂಸ್ಕೃತ ಶ್ಲೋಕಗಳ ಮೂಲಕ ಸ್ವಾಗತ ಎಂದು ಕ್ಯಾಪ್ಶನ್​ ನೀಡಿದ್ದರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...