ಅಮೆರಿಕ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಜೋ ಬಿಡೆನ್ ಶ್ವೇತ ಭವನಕ್ಕೆ ಎಂಟ್ರಿ ಕೊಡುತ್ತಿರುವ ವೇಳೆ ಸಂಸ್ಕೃತ ಶ್ಲೋಕವನ್ನ ಪಠಿಸಿದಂತಹ ವಿಡಿಯೋ ಫೇಸ್ಬುಕ್ನಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗಿದೆ.
ಅಮೆರಿಕ ಅಧ್ಯಕ್ಷರ ಸ್ವಾಗತದ ವೇಳೆ ಹಿಂದೂ ಸಂಸ್ಕೃತಿಯನ್ನ ಬಳಕೆ ಮಾಡಲಾಗಿದೆ ಅಂತಾ ಅನೇಕರು ಈ ವಿಡಿಯೋಗೆ ಕ್ಯಾಪ್ಶನ್ ನೀಡಿದ್ದರು. ಆದರೆ ಫ್ಯಾಕ್ಟ್ ಚೆಕ್ ವೇಳೆ ಈ ವಿಡಿಯೋದ ಅಸಲಿ ಸತ್ಯ ಬಯಲಾಗಿದೆ. ವೈರಲ್ ಆಗಿರುವ ಈ ಕ್ಲಿಪ್ 2014ರದ್ದು ಎನ್ನಲಾಗಿದ್ದು, ಶ್ವೇತಭವನದಲ್ಲಿ ಮಹಾತ್ಮಾ ಗಾಂಧಿ ಜನ್ಮದಿನವನ್ನ ಆಚರಿಸುತ್ತಿರುವ ದೃಶ್ಯವಾಗಿದೆ.
30 ಸೆಕೆಂಡ್ಗಳ ವಿಡಿಯೋವನ್ನ ನವೆಂಬರ್ 20, 2020ರಂದು ಫೇಸ್ಬುಕ್ ಹರಿಬಿಡಲಾಗಿದೆ. ಫೇಸ್ಬುಕ್ನಲ್ಲಿಲಿ ಈ ವಿಡಿಯೋವನ್ನ ಪೋಸ್ಟ್ ಮಾಡಿರುವ ಬಳಕೆದಾರರು, ಅಮೆರಿಕದ ಶ್ವೇತಭವನದಲ್ಲಿ ನಡೆಯುತ್ತಿರುವ ಸಮಾರಂಭ ಇದಾಗಿದೆ. ಅಧ್ಯಕ್ಷರಾಗಿ ಶ್ವೇತ ಭವನಕ್ಕೆ ಮೊದಲ ಬಾರಿಗೆ ಆಗಮಿಸಿದ ಬಿಡೆನ್ಗೆ ಸಂಸ್ಕೃತ ಶ್ಲೋಕಗಳ ಮೂಲಕ ಸ್ವಾಗತ ಎಂದು ಕ್ಯಾಪ್ಶನ್ ನೀಡಿದ್ದರು.