ಕೊರೊನಾ ವೈರಸ್ ಬಗ್ಗೆ ನಿರಂತರವಾಗಿ ತಪ್ಪು ಮಾಹಿತಿ ನೀಡುತ್ತಿದ್ದ ಕಾರಣಕ್ಕೆ ಫೇಸ್ಬುಕ್, ಆಸ್ಟ್ರೇಲಿಯಾದ ಜನಪ್ರಿಯ ಬಾಣಸಿಗ ಪೀಟ್ ಇವಾನ್ಸ್ರ ಖಾತೆಯ ಮೇಲೆ ನಿಷೇಧ ಹೇರಿದೆ.
ಒಂದು ದಶಲಕ್ಷಕ್ಕೂ ಹೆಚ್ಚು ಅನುಯಾಯಿಗಳನ್ನ ಹೊಂದಿದ್ದ ಪೀಟ್, ಕೊರೊನಾ ಬಗ್ಗೆ ಫೇಸ್ಬುಕ್ನಲ್ಲಿ ಸಾಕಷ್ಟು ಮಾಹಿತಿಗಳನ್ನ ಹಂಚಿಕೊಳ್ಳುತ್ತಿದ್ದರು.
ಕೋವಿಡ್ 19 ವಿಚಾರದಲ್ಲಿ ತಪ್ಪು ಮಾಹಿತಿಯನ್ನ ಹಂಚಿಕೊಳ್ಳಲು ಯಾರಿಗೂ ಅವಕಾಶ ನೀಡೋದಿಲ್ಲ. ಇಂತಹ ವಿಷಯಗಳ ವಿರುದ್ಧ ಸ್ಪಷ್ಟ ನಿಯಮಾವಳಿಗಳನ್ನ ನಾವು ಹೊಂದಿದ್ದೇವೆ. ಆದರೆ ಫೀಟ್ ಇವಾನ್ಸ್ ಪದೇ ಪದೇ ಈ ನಿಯಮಗಳನ್ನ ಉಲ್ಲಂಘಿಸಿದ್ದಕ್ಕಾಗಿ ಅವರ ಖಾತೆಯನ್ನ ತೆಗೆದುಹಾಕಿದ್ದೇವೆ ಎಂದು ಫೇಸ್ಬುಕ್ ಕಂಪನಿ ಹೇಳಿದೆ.