alex Certify ಜಂಡರ್ ರಿವೀಲ್ ಪಾರ್ಟಿಯಲ್ಲಿ ಸ್ಫೋಟ; ಭೂಕಂಪದ ಅನುಭವ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಜಂಡರ್ ರಿವೀಲ್ ಪಾರ್ಟಿಯಲ್ಲಿ ಸ್ಫೋಟ; ಭೂಕಂಪದ ಅನುಭವ

Explosion at Gender Reveal Party Sets off Earthquake-like Tremors in UK

ಮುಂದುವರಿದ ದೇಶಗಳಲ್ಲಿ ಜಂಡರ್ ರಿವೀಲ್ ಪಾರ್ಟಿಗಳು ಇತ್ತೀಚಿನ ಹೊಸ ಕ್ರೇಜ್. ಇದರಲ್ಲಿ ಅತಿ ಸಮೀಪದ ಬಂಧುಗಳಷ್ಟೆ ಪಾಲ್ಗೊಳ್ಳುವರು.

ಇತ್ತೀಚೆಗೆ ಇಂಗ್ಲೆಂಡ್‌ನ ನ್ಯೂ ಹ್ಯಾಂಪ್‌ಶೈರ್‌ನಲ್ಲಿ ನಡೆದ ಅಂತಹ ಒಂದು ಪಾರ್ಟಿಯಲ್ಲಿ ಸ್ಫೋಟ ಸಂಭವಿಸಿತು. ಇದರಿಂದ ಆ ಪ್ರದೇಶದಲ್ಲಿ ಭೂಕಂಪನದಂತೆ ಭಾಸವಾಯಿತೆಂದು ವರದಿಯಾಗಿದೆ. ಸುತ್ತಮುತ್ತಲ ನಿವಾಸಿಗಳು ಗಾಬರಿಗೊಂಡು ಬೆಚ್ಚಿಬಿದ್ದಿದ್ದಾರೆ.

ಬಯಲಾಯ್ತು ಖಾಸಗಿ ಆಸ್ಪತ್ರೆಗಳ ಬೆಡ್ ರಹಸ್ಯ: ಅಗತ್ಯವಿಲ್ಲದಿದ್ರೂ ರೋಗಿಗಳ ಹೆಸರಲ್ಲಿ ಹಾಸಿಗೆ ಭರ್ತಿ

ಪೊಲೀಸರು ಘಟನೆಯ ಬಗ್ಗೆ ತನಿಖೆ ನಡೆಸಿದಾಗ, ಒಂದು ಕುಟುಂಬವು ಜಂಡರ್ ರಿವೀಲ್ ಪಾರ್ಟಿ ಆಚರಿಸಿದ್ದನ್ನು ಗೊತ್ತಾಗಿದೆ. ಪಾರ್ಟಿಯು ಕ್ವಾರಿಯಲ್ಲಿ ನಡೆದಿತ್ತು.

ಪೊಲೀಸ್ ಪ್ರಕಾರ, ಕುಟುಂಬವು ಅಲ್ಲಿ 80 ಪೌಂಡ್ ಸ್ಫೋಟಕಗಳನ್ನು ಬಳಸಿದೆ. ಸ್ಫೋಟಕಗಳು ಮುಖ್ಯವಾಗಿ ಟ್ಯಾನ್ನರೈಟ್ ಅನ್ನು ಒಳಗೊಂಡಿರುತ್ತದೆ, ಇದನ್ನು ಸಾಮಾನ್ಯವಾಗಿ ಶಸ್ತ್ರಾಸ್ತ್ರಗಳ ಅಭ್ಯಾಸಕ್ಕಾಗಿ ಬಳಕೆ ಮಾಡಲಾಗುತ್ತದೆ.

ಈ ಘಟನೆಯಲ್ಲಿ ಯಾವುದೇ ಜೀವಹಾನಿ ವರದಿಯಾಗಿಲ್ಲವಾದರೂ, ಅದು ಭಯಾನಕವಾಗಿತ್ತು ಎಂದು ಸ್ಥಳೀಯ ನಿವಾಸಿಗಳು ಬಹಿರಂಗಪಡಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...